ಬೆಂಗಳೂರು: 2023-24ನೇ ಸಾಲಿನ ಮೆಟ್ರಿಕ್ ನಂತ್ರದ ಹಾಗೂ ಮೆಟ್ರಿಕ್ ಕಂ ಮೀನ್ ಶುಲ್ಕ ಮರುಪಾವತಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸೋದಕ್ಕೆ ದಿನಾಂಕ 15-02-2024 ಕೊನೆಯ ದಿನವಾಗಿದೆ.
ಈ ಕುರಿತಂತೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸೋ ಮೊದಲು SSP ತಂತ್ರಾಂಶದಲ್ಲಿ ಲಾಗಿನ್ ಆಗಬೇಕು. ಇದಕ್ಕಾಗಿ ಎಸ್ ಎಸ್ ಪಿ ವಿದ್ಯಾರ್ಥಿ ಖಾತೆಗೆ ಲಾಗಿನ್ ಆಗಲು https://ssp.postmetric.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕಾಗಿದೆ.
ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಿದ್ದಲ್ಲಿ, ಸದರಿ ಅರ್ಜಿಯು ಸಂಬಂಧಿಸಿದ ಪ್ರಾಯೋಜಿಕ ಕಲ್ಯಾಣ ಇಲಾಖೆಯಿಂದ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಎಸ್ ಎಸ್ ಪಿಯಲ್ಲಿ 2023-24ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ಬಳಕೆದಾರರ ಕೈಪಿಡಿಯನ್ನು ಸಂಪೂರ್ಣವಾಗಿ ಪರಾಮರ್ಶಿಸಿ, ನಂತ್ರ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಬೇಕಾಗುವ ದಾಖಲೆಗಳು ಏನು.?
10ನೇ ತರಗತಿ ನೋಂದಣಿ ಸಂಖ್ಯೆ, ಜಾತಿ, ಆದಾಯ ಪ್ರಮಾಣ ಪತ್ರ, ಇಡಬ್ಲೂಯ ಎಸ್ ಪ್ರಮಾಣ ಪತ್ರಗಳು, ಎನ್ ಎಸ್ ಪಿ ಸಂಖ್ಯೆ, ವಿಕಲಚೇತನ ಪ್ರಮಾಣ ಪತ್ರ ಬೇಕಾಗಿದೆ.
ಅರ್ಜಿ ಸಲ್ಲಿಕೆಯಾದ 30 ದಿನಗಳ ಒಳಗೆ ವಿದ್ಯಾರ್ಥಿಯ ಬ್ಯಾಂಕಿನೊಂದಿಗೆ ವಿದ್ಯಾರ್ಥಿಯ ಆಧಾರ್ ಜೋಡನೆ ಮತ್ತು ಎನ್ ಸಿಪಿಐ ಜೋಡನೆ ಆಗದೇ ಇದ್ದಲ್ಲಿ, ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ನಿಮ್ಮಿಂದ ಆಡಳಿತ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೊರಡಿ : ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ
LIC Share Rises: ಮೊದಲ ಬಾರಿಗೆ 1000 ರೂ ದಾಟಿದ ಎಲ್ಐಸಿ ಮಾರುಕಟ್ಟೆ ಬಂಡವಾಳ