ಬೆಂಗಳೂರು: ರಾಜ್ಯದ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಮಂಡಳಿಯಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಮೂಲಕ ಅವರ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ.
ಈ ಬಗ್ಗೆ ಕಾರ್ಮಿಕ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ನೀವು ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿದ್ದು, ಕಾರ್ಮಿಕ ಕಾರ್ಡ್ ಹೊಂದಿದ್ದರೆ ಮಂಡಳಿಯು ನೀಡುವ ಸೌಲಭ್ಯಗಳ ಲಾಭಗಳನ್ನು ಪಡೆದುಕೊಳ್ಳಬಹುದು.
ಕಾರ್ಮಿಕರೇ ನೀವು ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದಲ್ಲಿ ಈ ಕೆಳಗಿನ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತೀರಿ ಎಂದಿದೆ.
ಹೀಗಿವೆ ನೋಂದಾಯಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಪಟ್ಟಿ
- ಪಿಂಚಣಿ ಸೌಲಭ್ಯ
- ಕುಟುಂಬ ಪಿಂಚಣಿ ಸೌಲಭ್ಯ
- ದುರ್ಬಲತೆ ಪಿಂಚಣಿ
- ಟೂಲ್ ಕಿಟ್ ಸೌಲಭ್ಯ
- ಹೆರಿಗೆ ಸಹಾಯಧನ
- ಅಂತ್ಯಕ್ರಿಯೆ ವೆಚ್ಚ
- ಶೈಕ್ಷಣಿಕ ಸಹಾಯಧನ
- ವೈದ್ಯಕೀಯ ಸಹಾಯಧನ
- ಅಪಘಾತ ಪರಿಹಾರ
- ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
- ಮದುವೆ ಸಹಾಯಧನ
- ತಾಯಿ ಮಗು ಸಹಾಯಹಸ್ತ
ಈ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ನೋಂದಾಯಿತ ಕಾರ್ಮಿಕರು ಕಾರ್ಮಿಕ ಸಹಾಯವಾಣಿ 155214ಗೆ ಕರೆ ಮಾಡಿ ಪಡೆಯಬಹುದಾಗಿದೆ.
ನೀವು ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿದ್ದು, ಕಾರ್ಮಿಕ ಕಾರ್ಡ್ ಹೊಂದಿದ್ದರೆ ಮಂಡಳಿಯು ನೀಡುವ ಸೌಲಭ್ಯಗಳ ಲಾಭಗಳನ್ನು ಪಡೆದುಕೊಳ್ಳಬಹುದು.#ಶ್ರಮಮೇವ_ಜಯತೇ#KBOCWWB #ಕಾರ್ಮಿಕ_ಇಲಾಖೆ pic.twitter.com/D0rrur3BoZ
— Construction Workers Welfare Board (@WorkersBoard) November 18, 2024
BREAKING: ಫೆಂಗಲ್ ಚಂಡಮಾರುತದ ಹಿನ್ನಲೆ: ನಾಳೆ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Watch Video: ಫೆಂಗಲ್ ಚಂಡಮಾರುತ ಎಫೆಕ್ಟ್: ಲ್ಯಾಂಡ್ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ, ವಿಡಿಯೋ ವೈರಲ್