ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕೆಲ ರೈಲುಗಳನ್ನು ಪ್ರಾಯೋಗಿಕವಾಗಿ ನಿಲುಗಡೆ ಮುಂದುವರೆಸಲಾಗಿದೆ. ಇನ್ನೂ ವಿಶೇಷ ರೈಲುಗಳ ಸಂಚಾರವನ್ನು ಮುಂದುವರೆಸಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ.
I.ರೈಲುಗಳ ಪ್ರಾಯೋಗಿಕ ನಿಲುಗಡೆ ಮುಂದುವರಿಕೆ
ಈ ಕೆಳಗೆ ತಿಳಿಸಲಾದ ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಮುಂದಿನ ಆದೇಶದವರೆಗೆ ನಿಲುಗಡೆಯನ್ನು ಮುಂದುವರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ:
1. ರೈಲು ಸಂಖ್ಯೆ 16527 ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲನ್ನು ಆಗಸ್ಟ್ 15, 2023 ರಿಂದ ಈಗಾಗಲೇ ಪರಪನಂಗಡಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ.
2. ರೈಲು ಸಂಖ್ಯೆ 16528 ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 15, 2023 ರಿಂದ ಈಗಾಗಲೇ ಪರಪನಂಗಡಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ.
3. ರೈಲು ಸಂಖ್ಯೆ 22677 ಯಶವಂತಪುರ-ಕೊಚುವೇಲಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 25, 2023 ರಿಂದ ಈಗಾಗಲೇ ತಿರುವಲ್ಲಾ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ.
4. ರೈಲು ಸಂಖ್ಯೆ 22678 ಕೊಚುವೇಲಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 25, 2023 ರಿಂದ ಈಗಾಗಲೇ ತಿರುವಲ್ಲಾ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ.
II. ವಿಶೇಷ ರೈಲುಗಳ ಸಂಚಾರ ಮುಂದುವರಿಕೆ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನರಸಾಪುರ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಪ್ರಸ್ತುತ ಸೇವೆಯ ದಿನ, ಸಮಯ ಮತ್ತು ನಿಲುಗಡೆಗಳೊಂದಿಗೆ ಮುಂದುವರಿಸಲು ದಕ್ಷಿಣ ಮಧ್ಯ ರೈಲ್ವೆಯು ನಿರ್ಧರಿಸಿದೆ.
1. ಪ್ರತಿ ಶುಕ್ರವಾರ ನರಸಾಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07153 ನರಸಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಫೆಬ್ರವರಿ 2, 2024 ರಿಂದ ಮಾರ್ಚ್ 29, 2024 ರವರೆಗೆ ಮುಂದುವರಿಸಲಾಗುತ್ತಿದೆ.
2. ಪ್ರತಿ ಶನಿವಾರ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07154 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಫೆಬ್ರವರಿ 3, 2024 ರಿಂದ ಮಾರ್ಚ್ 30, 2024 ರವರೆಗೆ ಮುಂದುವರಿಸಲಾಗುತ್ತಿದೆ.
ಪರಿಷ್ಕೃತ ಕೋಚ್ ಸಂಯೋಜನೆ: 1- ಎಸಿ ಫಸ್ಟ್ ಕ್ಲಾಸ್ ಕಮ್ ಎಸಿ ಟು ಟೈಯರ್ ಬೋಗಿ, 2- ಎಸಿ ಟು ಟೈಯರ್ ಬೋಗಿಗಳು, 2 – ಎಸಿ ತ್ರಿ ಟೈಯರ್ ಬೋಗಿಗಳು, 10- ಸ್ಲೀಪರ್ ಕ್ಲಾಸ್ ಬೋಗಿಗಳು, 4- ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2- ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು.
ರಾಜ್ಯ ಸರ್ಕಾರದಿಂದ OPS ಹೆಸರಿನಲ್ಲಿ ನೌಕರರಿಗೆ ‘ಮಕ್ಮಲ್ ಟೋಪಿ’ : ಮಾಜಿ ಸಿಎಂ ಹೆಚ್‌ಡಿಕೆ ಆಕ್ರೋಶ