ನವದೆಹಲಿ : ಡಿಜಿಲಾಕರ್ʼಗೆ ಸೆಕ್ಯುರಿಟಿ ಪಿನ್ʼನ ರೀತಿಯಲ್ಲಿ ಹೆಚ್ಚುವರಿ ಭದ್ರತೆ ಸೇರಿಸಲಾಗಿದೆ. ಇದರರ್ಥ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಘೋಷಿಸಿದಾಗ, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನ ಡೌನ್ಲೋಡ್ ಮಾಡಲು ಸಾಧ್ಯವಾಗಲು ಪಿನ್ ನಮೂದಿಸಬೇಕಾಗುತ್ತದೆ. ಇನ್ನು ವಲಸೆ ಪ್ರಮಾಣಪತ್ರವನ್ನ ಡೌನ್ಲೋಡ್ ಮಾಡಲು ಆರು ಅಂಕಿಗಳ ಭದ್ರತಾ ಪಿನ್ ಸಹ ಅಗತ್ಯವಿದೆ.
ಮಂಡಳಿಯು ಹೊರಡಿಸಿದ ನೋಟಿಸ್ ಪ್ರಕಾರ, ವಿದ್ಯಾರ್ಥಿವಾರು ಭದ್ರತಾ ಪಿಐಎನ್ಗಳನ್ನ ಶಾಲೆಗಳಿಗೆ ನೀಡಲಾಗುವುದು. ಅದನ್ನು ವೈಯಕ್ತಿಕ ವಿದ್ಯಾರ್ಥಿಗಳಿಗೆ ವರ್ಗಾಯಿಸಲು ಶಾಲೆಗಳು ಜವಾಬ್ದಾರರಾಗಿರುತ್ತವೆ.
ಪಿಎನ್ಗಳನ್ನು ಡೌನ್ಲೋಡ್ ಮಾಡಲು, ಶಾಲೆಗಳು cbse.digitallocker.gov.in ಭೇಟಿ ನೀಡಬೇಕಾಗುತ್ತದೆ ಮತ್ತು ರುಜುವಾತುಗಳನ್ನ ಬಳಸಿಕೊಂಡು ಖಾತೆಗೆ ಲಾಗಿನ್ ಆಗಬೇಕು.
ನಂತ್ರ ಅವರು ಪರದೆಯ ಎಡ ಫಲಕದಲ್ಲಿ ಲಭ್ಯವಿರುವ ಡೌನ್ಲೋಡ್ ಪಿನ್ ಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಒಮ್ಮೆ ಪಿನ್ ಒತ್ತಿದ ನಂತ್ರ ಶಾಲೆಗಳು ಅದನ್ನು ವೈಯಕ್ತಿಕ ವಿದ್ಯಾರ್ಥಿಗಳೊಂದಿಗೆ ಸುರಕ್ಷಿತ ರೀತಿಯಲ್ಲಿ ಹಂಚಿಕೊಳ್ಳಬಹುದು.
ಡಿಜಿಲಾಕರ್ ಖಾತೆಗಳನ್ನ ಸಕ್ರಿಯಗೊಳಿಸಿದ ನಂತ್ರ ವಿದ್ಯಾರ್ಥಿಗಳು ‘ವಿತರಿಸಿದ ದಾಖಲೆಗಳು’ ವಿಭಾಗದ ಅಡಿಯಲ್ಲಿ ತಮ್ಮ ಡಿಜಿಟಲ್ ಶೈಕ್ಷಣಿಕ ದಾಖಲೆಗಳನ್ನ ಪ್ರವೇಶಿಸಲು ಸಾಧ್ಯವಾಗುತ್ತದೆ.
10 ಮತ್ತು 12ನೇ ತರಗತಿ ಟರ್ಮ್ 2 ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನ ಜುಲೈ ಅಂತ್ಯದ ವೇಳೆಗೆ ಪ್ರಕಟಿಸುವ ನಿರೀಕ್ಷೆಯಿದೆ.
ಒಮ್ಮೆ ಘೋಷಿಸಿದ ನಂತ್ರ ವಿದ್ಯಾರ್ಥಿಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಹೊರತುಪಡಿಸಿ, cbseresults.nic.in ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಅಂಕಗಳನ್ನು ಡೌನ್ಲೋಡ್ ಮಾಡಲು ವಿದ್ಯಾರ್ಥಿಗಳಿಗೆ ತಮ್ಮ ರೋಲ್ ಸಂಖ್ಯೆಗಳು ಮತ್ತು ಶಾಲಾ ಸಂಖ್ಯೆಗಳು ಬೇಕು.
ಸಿಬಿಎಸ್ಇ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2022ರ ಬ್ಯಾಚ್ಗಾಗಿ 10ನೇ ತರಗತಿ ಮತ್ತು 12ನೇ ತರಗತಿ ಟರ್ಮ್ 2 ಪರೀಕ್ಷೆಗಳನ್ನ ನಡೆಸಿತು. ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಮೇ 4ರವರೆಗೆ ಮತ್ತು 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 26ರಿಂದ ಜೂನ್ 15ರವರೆಗೆ ನಡೆದವು.