ಮೈಸೂರು: ನಿವೃತ್ತಿ ಹೊಂದಿದ ಎನ್ಪಿಎಸ್ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಗೆ ಆಯ್ಕೆ ಮಾಡಲು ದಿನಾಂಕ 30-06-2025 ಕೊನೆಯ ದಿನವಾಗಿದೆ.
ನೈಋತ್ಯ ರೈಲ್ವೆ, ನಿವೃತ್ತಿ ಹೊಂದಿದ ಎನ್ಪಿಎಸ್ ನೌಕರರಿಗೆ ಸೂಚನೆ:
ಪಿ ಏಪ್ ಆರ್ ಡಿಎ ಗೆಜೆಟ್ ಅಧಿಸೂಚನೆ ದಿನಾಂಕ 19.03.2025 ಹಾಗೂ ರೈಲ್ವೆ ಬೋರ್ಡ್ ಸರ್ಕ್ಯುಲರ್ಗಳಾದ (ಆರ್ ಬಿ ಇ ಸಂಖ್ಯೆ 25/2025 ಮತ್ತು ಆರ್ ಬಿ ಎ ಸಂಖ್ಯೆ 10/2025) ಪ್ರಕಾರ, ಎನ್ಪಿಎಸ್ ಅಡಿಯಲ್ಲಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಅನ್ನು 01.04.2025 ರಿಂದ ಅನುಷ್ಠಾನಗೊಳಿಸಲಾಗಿದೆ.
ಎನ್ಪಿಎಸ್ ಅಡಿಯಲ್ಲಿ ಸೇವೆ ಸಲ್ಲಿಸಿ 31.03.2025ರೊಳಗೆ ನಿವೃತ್ತರಾದ ಹಾಗೂ ಅಗತ್ಯ ಅರ್ಹ ಸೇವಾ ಅವಧಿ ಹೊಂದಿರುವ ನೌಕರರು, ಸಿ ಆರ್ ಎ ಪೋರ್ಟಲ್ ಮೂಲಕ ಅಥವಾ ತಮ್ಮ ವಿಭಾಗೀಯ ಕಛೇರಿಗೆ ಫಾರ್ಮ್-ಬಿ2 ಸಲ್ಲಿಸುವ ಮೂಲಕ ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದು.
ಅರ್ಹರಾಗಿರುವ, ನಿವೃತ್ತಿಯ ನಂತರ ಮೃತರಾದ ಎನ್ಪಿಎಸ್ ನೌಕರರ ಪತ್ನಿ/ಕಾನೂನು ವಾರಸುದಾರರು ಸಂಬಂಧಿತ ಫಾರ್ಮ್ಗಳು (ಬಿ3, ಬಿ4, ಬಿ5 ಅಥವಾ ಬಿ6) ಅನ್ನು ತಮ್ಮ ವಿಭಾಗಕ್ಕೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2025
ಸೂಚನೆ: ಒಂದು ಬಾರಿ ಯುಪಿಎಸ್ ಆಯ್ಕೆ ಮಾಡಿದರೆ, ಅದನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವಿಭಾಗದ ಕಲ್ಯಾಣ ಅಥವಾ ಸೆಟಲ್ಮೆಂಟ್ ವಿಭಾಗವನ್ನು ಸಂಪರ್ಕಿಸಿ.