ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹೆಚ್ ಆರ್ ಎಂ ಎಸ್-5 ತಂತ್ರಾಂಶದಲ್ಲಿ ವೇತನ ಸೆಳೆಯುವ ನೌಕರರು ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ಇಎಸ್ಎಸ್ ನ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ 2.0 ನಿರ್ದೇಶನಾಲಯ ಯೋಜನಾ ವ್ಯವಸ್ಥಾಪಕರು ಮಾಹಿತಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಚಿವಾಲಯಗಳ/ ಇಲಾಖೆಗಳ ಪೈಕಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ಈಗಾಗಲೇ ವೇತನ ಸೆಳೆಯುತ್ತಿರುವ ನೌಕರರಿಗೆ ESS (Employee Self Service) web portal “https://hrmsess.karnatakata.gov.in” ಅಪ್ಲಿಕೇಶನ್ (APK Name: gov.ka.ess_app)
Android ESS ಬಳಸಿ ಸದರಿ ನೌಕರರ/ ಅಧಿಕಾರಿಗಳ ಲಾಗಿನ್ ಮೂಲಕ ಈ ಕೆಳಕಂಡ ವಿವರಗಳನ್ನು ವೀಕ್ಷಿಸಬಹುದು:
1. ವೇತನ ಪಟ್ಟಿ.
2. ರಜಾ ವಿವರಗಳು.
a. ಗಳಿಕೆ ರಜೆ.
b. ಅರ್ಧ ವೇತನ ರಜೆ.
c. ಮುಂಬರುವ ಸಾರ್ವಜನಿಕ ರಜಾದಿನಗಳು.
3. ಸಾಲದ ವಿವರಗಳು.
a. ಸಕ್ರಿಯ ಸಾಲಗಳು,
b. ಮುಕ್ತಗೊಳಿಸಿದ ಸಾಲಗಳು.
4. ಮುಂಗಡ ವಿವರಗಳು.
a.ಸಕ್ರಿಯ ಮುಂಗಡಗಳು.
b. ಮುಚ್ಚಿದ ಮುಂಗಡಗಳು.
c. ಮುಂಗಡ ಅರ್ಜಿಗಳು,
5. ವಿಮೆ
a. ಸಕ್ರಿಯ ವಿಮೆಗಳು,
b. ಒಟ್ಟು ಪ್ರೀಮಿಯಂ ಮೊತ್ತ.
6. ವಸೂಲಾತಿ
a. ಸಕ್ರಿಯ ವಸೂಲಾತಿಗಳು,
b. ಸಕ್ರಿಯ ಸ್ಥಳೀಯ ವಸೂಲಾತಿಗಳು.
c. ಮುಕ್ತಗೊಳಿಸಿದ ವಸೂಲಾತಿಗಳು.
7. ಡಿಜಿಲಾಕರ್.
8. ನೌಕರರ/ ಅಧಿಕಾರಿಯ ಪ್ರೊಫೈಲ್.
a, ನೌಕರರ/ ಅಧಿಕಾರಿಯ ಮಾಹಿತಿ.
b. ಸಂಯೋಜನೆಗಳು,
C. ಸಹಾಯ ಮತ್ತು ಬೆಂಬಲ.
9. ಹಬ್ಬದ ಮುಂಗಡ,
10. ಗಳಿಕೆ ರಜೆ ನಗದೀಕರಣ.
ಮೇಲ್ಕಂಡ ವಿವರಗಳ ಕ್ರಮ ಸಂಖ್ಯೆ 1 ರಿಂದ 8 ರಲ್ಲಿರುವಂತೆ ESS ಲಾಗಿನ್ ಮೂಲಕ ಸದರಿ ನೌಕರರು/ ಅಧಿಕಾರಿಗಳು ಅವರ ವೇತನದ ವಿವರಗಳನ್ನು ವೀಕ್ಷಿಸಲು ಮಾತ್ರ ಅನುವುಮಾಡಿಕೊಡಲಾಗಿದೆ. ಮುಂದುವರೆದು, ಕ್ರಮ ಸಂಖ್ಯೆ 9 ಹಾಗೂ 10 ರಲ್ಲಿರುವಂತೆ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವು ಕಾಲಕಾಲಕ್ಕೆ ಹೊಸ ಮಾಡ್ಯೂಲ್ ಗಳ ಜೊಡಣೆಯಿಂದ ನವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (FA) ಪಡೆಯಲು ಅರ್ಜಿಯನ್ನು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ (EL encashment) ಅರ್ಜಿಯನ್ನು ಅವರ ಲಾಗಿನ್ ಬಳಸಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಕೋರಿದೆ ಹಾಗೂ ಇದರ ಬಗ್ಗೆ ತಮ್ಮ ಇಲಾಖಾ ವ್ಯಪ್ತಿಯಲ್ಲಿರುವ ಎಲ್ಲಾ ಡಿ.ಡಿ.ಒ ಗಳಿಗೆ ಸೂಕ್ತ ಮಾರ್ಗಸೂಚಿಯನ್ನು ನಿರ್ದೇಶನವನ್ನು ನೀಡಲು ಕೋರಿದೆ.
ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರ ಸಹಾಯಕ್ಕಾಗಿ, ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕ ರಜೆಯ ನಗಧೀಕರಣಕ್ಕಾಗಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಈ ಕೈಪಿಡಿಯ ‘ಸಾಫ್ಟ್ ಪ್ರತಿ” ಯನ್ನು ಹೆಚ್. ಆರ್. ಎಂ. ಎಸ್ 2 ತಂತ್ರಾಂಶದ ಲ್ಯಾಂಡಿಗ್ ಪುಟದಲ್ಲಿರುವ “Help and Tutorials” ಮಾಡ್ಯೂಲ್ ನಲ್ಲಿ ವಿಕ್ಷಿಸಲು ಹಾಗೂ ಡೌನ್‌ಲೋಡ್
ಮಾಡಲು ಕೂಡ ಅನುಕೂಲ ಮಾಡಿಕೊಡಲಾಗಿದೆ.
ಇದರ ಸದುಪಯೋಗ ಪಡೆಯಲು ಸೂಚಿಸಿ, ಇನ್ನು ಮುಂದೆ ಎಲ್ಲಾ ನೌಕರರ ಕ್ಷೇಮ್ ಗಳ ಕೋರಿಕೆ, ರಜೆಯ ಕೋರಿಕೆ, ದೂರು ಪರಿಹಾರ (complaint redressal) ದ ಪ್ರಕ್ರಿಯೆಗಳು ಕೂಡ ESS ಮುಖಾಂತರವೇ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಎಲ್ಲಾ ನೌಕರರು ತಮ್ಮ ಕೋರಿಕೆ ಅರ್ಜಿಯನ್ನು ಆನ್ ಲೈನ್ ನಲ್ಲಿ ESS ಮೂಲಕವೇ ನೀಡಬೇಕಾಗಿರುವುದರಿಂದ ಹಬ್ಬದ ಮುಂಗಡ ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಕವಾಗಿ ESS ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಮ್ಮ ಮುಖಾಂತರ ನಿಮ್ಮ ಇಲಾಖಾ ವ್ಯಾಪ್ತಿಗೆ ಬರುವ ಎಲ್ಲಾ ನೌಕರರಿಗೆ ತಿಳಿಸಲು/ ಅರಿವು ಮೂಡಿಸಲು ಈ ಪತ್ರದ ಮೂಲಕ ಕೋರಿದೆ.
ರಾಜ್ಯ ಸರ್ಕಾರದಿಂದ ‘ಟ್ರಾಫಿಕ್ ದಂಡ ಬಾಕಿ’ ಉಳಿಸಿಕೊಂಡಿರೋ ‘ವಾಹನ ಸವಾರ’ರಿಗೆ ಗುಡ್ ನ್ಯೂಸ್