ಬೆಂಗಳೂರು: ಅಕ್ಟೋಬರ್.1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೇ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS) ಅನುಕೂಲಗಳು ಏನು ಅಂತ ಮುಂದೆ ಓದಿ.
ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ಸರ್ಕಾರಿ ಮಹಿಳಾ ನೌಕರರ ತಂದೆ ತಾಯಿಗಳು ಕೆ ಎ ಎಸ್ ಎಸ್ ಸೌಲಭ್ಯ ಪಡೆಯಬಹುದು ಎಂಬುದಾಗಿ ತಿಳಿಸಿದೆ.
ಸರ್ಕಾರಿ ನೌಕರರ ಕುಟುಂಬಸ್ಥರಿಗೆ ಆದಾಯ ಮಿತಿಯನ್ನು ರೂ.17,000ರಿಂದ 27,000ಕ್ಕೆ ಹೆಚ್ಚಿಸಲಾಗಿದೆ. ಸುಮಾರು 2000 ಖಾಯಿಲೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ಸೌಲಭ್ಯ ದೊರೆಯಲಿವೆ.
ಸಿ ಮತ್ತು ಡಿ ವೃಂದದ ಸರ್ಕಾರಿ ನೌಕರರಿಗೆ ವೈದ್ಯಕೀಯ ಭತ್ಯೆಯನ್ನು ಮುಂದುವರೆಸಲಾಗುವುದು. ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಯಾರಾದರೂ ಒಬ್ಬರು ಮಾತ್ರ ಈ ಯೋಜನೆಗೆ ಮಾಸಿಕ ವಂತಿಕೆ ಪಾವತಿಸಬಹುದಾಗಿದೆ.
ALERT : ಧೂಮಪಾನಿಗಳೇ ಎಚ್ಚರ : `ಸಿಗರೇಟ್’ನಿಂದ ಈ ಗಂಭೀರ ಕಾಯಿಲೆಗಳು ಬರಬಹುದು.!