ಬೆಂಗಳೂರು : ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ತೆರಳುವವರು ಮನೆಯ ಭದ್ರತೆ ಬಗ್ಗೆ ಎಚ್ಚರ ವಹಿಸುವಂತೆ ಸರ್ಕಾರವು ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ ಹೊರಡಿಸಿದೆ.
ಮನೆ ಬಾಗಿಲಿಗೆ ಬೀಗ ಹಾಕುವುದನ್ನು ಮರೆಯದಿರಿ
ನಗದು, ಬೆಲೆ ಬಾಳುವ ವಸ್ತುಗಳನ್ನು ಲಾಕರ್‌ನಲ್ಲಿಡಿ
ಮನೆಯ ಸುತ್ತ ಸಿಸಿಟಿವಿ ಅಳವಡಿಸಿ
ಬೀಗದ ಕೀಯನ್ನು ಪಕ್ಕದ ಮನೆಯವರಲ್ಲಿ ಕೊಡುವುದು ಅಥವಾ ಎಲ್ಲೋ ಇಟ್ಟು ಹೋಗುವುದು ಮಾಡಬೇಡಿ
ಕಿಟಕಿಗಳನ್ನು, ಮನೆ ಮುಂಭಾಗದ ಗೇಟ್‌ಗಳನ್ನು ಸರಿಯಾಗಿ ಲಾಕ್ ಮಾಡಿ
ಬೀಗದ ಕೀಯನ್ನು ಡೋರ್ ಮ್ಯಾಟ್, ಹೂವಿನ ಕುಂಡಗಳಲ್ಲಿ ಇಡಬೇಡಿ
ಮನೆ ಕೆಲಸದವರ ಬಗ್ಗೆಯೂ ಜಾಗರೂಕರಾಗಿರಿ
ಹೆಚ್ಚು ದಿನ ಪ್ರವಾಸಕ್ಕೆ ಹೋಗುವುದಾದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ