ವಿಜಯನಗರ: ಕರ್ನಾಟಕ ದೇಶದಲ್ಲೇ ಹಕ್ಕುಪತ್ರ ನೀಡುವಲ್ಲಿ ಮೊದಲ ರಾಜ್ಯವಾಗಬೇಕು. ಕರ್ನಾಟಕದಲ್ಲಿ ಹಕ್ಕು ಪತ್ರ ನೀಡುವ ಮೂಲಕ ಜನತೆಗೆ 6ನೇ ಗ್ಯಾರಂಟಿ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ ಎಂಬುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವಂತ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ನಾವು ಪಂಚ ಗ್ಯಾರಂಟಿ ಜೊತೆಗೆ ಬಡ ಜನರಿಗೆ ಹಕ್ಕು ಪತ್ರ ನೀಡಬೇಕು ಎಂಬುದಾಗಿ ನಿರ್ಧರಿಸಿದ್ದೆವು. ಅದರಂತೆ ಇಂದು ಯಾವುದೇ ಜಾತಿ-ಧರ್ಮ ನೋಡದೇ ವಿತರಣೆ ಮಾಡಲಾಗುತ್ತಿದೆ ಎಂದರು.
ಇಂದು ಹಕ್ಕುಪತ್ರ ನೀಡುತ್ತಿರುವಂತ ಇವರಿಗೆ ಹತ್ತು ವರ್ಷದಿಂದ ಆಸ್ತಿಗಳ ಪತ್ರ ಇರಲಿಲ್ಲ. ಈ ವಿಷಯ ತಿಳಿದು ನಮ್ಮ ಕಾಂಗ್ರೆಸ್ ನಾಯಕರ ಜೊತೆಗೆ ಮಾತನಾಡಿ, ಇಂದು ಅತ್ಯಂತ ಸಂತಸದಿಂದ ಹಕ್ಕುಪತ್ರ ವಿತರಣೆ ಮೂಲಕ 6ನೇ ಗ್ಯಾರಂಟಿ ಜಾರಿಗೊಳಿಸಿದ್ದೇವೆ. 1 ಲಕ್ಷ ಕುಟುಂಬಕ್ಕೆ ನಾವು ಆಸ್ತಿಗಳ ಹಕ್ಕುಪತ್ರ ವರ್ಗಾವಣೆ ಮಾಡಿದ್ದೇವೆ. ಇದು ಇಂದಿರಾ ಗಾಂಧಿ ಅವರ ಕನಸು ಕೂಡ ಆಗಿತ್ತು. ಅವರ ಕನಸು ಇಂದು ನನಸು ಮಾಡಲಾಗಿದೆ ಎಂದರು.
SHOCKING: ವಿಶ್ವವನ್ನೇ ಕಾಡುತ್ತಿದೆ ಸೈಲೆಂಟ್ ಕಿಲ್ಲರ್: ಮೂವರಲ್ಲಿ ಒಬ್ಬರಿಗೆ ಹೈಪರ್ ಟೆನ್ಷನ್ !
ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ