Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾತ್ರೋರಾತ್ರಿ ನಡೆದ ದಾಳಿಯಲ್ಲಿ ಇರಾನ್ ಭದ್ರತಾ ಮುಖ್ಯಸ್ಥ ‘ಅಲಿ ಲಾರಿಜಾನಿ’ ಹತ್ಯೆ ; ಇಸ್ರೇಲ್

17/03/2026 3:28 PM

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ, ಶಿಕ್ಷಣ ಸಚಿವರು ಮತ್ತು ಗಣ್ಯರು

17/03/2026 3:28 PM

ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ 𝗕𝗔𝗙 ಆಗ್ರಹ

17/03/2026 3:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ 𝗕𝗔𝗙 ಆಗ್ರಹ
KARNATAKA

ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ 𝗕𝗔𝗙 ಆಗ್ರಹ

By kannadanewsnow0917/03/2026 3:20 PM

ಬೆಂಗಳೂರು : ಬಹುನಿರೀಕ್ಷಿತ ‘ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ’ಯನ್ನು (𝗞𝗔𝗢𝗠𝗔 𝟮𝟬𝟮𝟱) ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲೇ ಅಂಗೀಕರಿಸಬೇಕು ಹಾಗೂ ಅಪಾರ್ಟ್‌ಮೆಂಟ್‌ ಸಮುದಾಯಗಳ ಮೇಲೆ ವಿಧಿಸಲಾಗಿರುವ ತಾರತಮ್ಯದಿಂದ ಕೂಡಿದ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು ಎಂದು‌ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡೆರೇಷನ್ (𝗕𝗔𝗙) ಸರ್ಕಾರವನ್ನು ಮನವಿ ಮಾಡಿದೆ.

ಇಂದು ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಫೆಡರೇಷನ್‌ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಹಳೆಯ 𝟭𝟵𝟳𝟮 ರ ಕಾಯ್ದೆಯ ಬದಲಿಗೆ ಹೊಸ ಕಾನೂನನ್ನು ತರಲಾಗುವುದು ಎಂದು ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿ ಎರಡು ವರ್ಷಗಳು ಕಳೆದಿದೆ. ಜುಲೈ 𝟮𝟬𝟮𝟱 ರಿಂದಲೇ 𝗞𝗔𝗢𝗠𝗔 𝟮𝟬𝟮𝟱 ಕರಡು ಸಿದ್ಧವಾಗಿದೆ. ಕಳೆದ ವರ್ಷ ಡಿಸೆಂಬರ್‌ 2 ರಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಬೆಳಗಾವಿ ಅಧಿವೇಶನದಲ್ಲಿ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆಯನ್ನು ಅಂಗೀಕರಿಸುವಂತೆ ಒತ್ತಾಯಿಸಲಾಗಿತ್ತು. ಆ ನಂತರ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು ಬೆಂಗಳೂರು ನಗರದ ಅಪಾರ್ಟ್‌ಮೆಂಟ್‌ ಫೆಡರೇಷನ್‌ ಸದಸ್ಯರನ್ನು ಆಹ್ವಾನಿಸಿ ಸಾರ್ವಜನಿಕವಾಗಿ ನಮ್ಮ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಸಲಹೆಗಳನ್ನು ನೀಡುವ ಮತ್ತು ಅದನ್ನು ಪರಿಶೀಲಿಸುವ ಕಾರ್ಯ ಮುಗಿದಿದ್ದರೂ ಕೂಡಾ ಈ ಮಸೂದೆಯನ್ನು ಇನ್ನೂ ಮಂಡಿಸುವ ತಯಾರಿ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

“ಲಕ್ಷಾಂತರ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ನೀಡಿದ್ದ ಭರವಸೆಗಳ ಬಗ್ಗೆ ಸರ್ಕಾರವನ್ನ ನೆನಪಿಸಲು ನಾವು ಇಂದು ಈ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದೇವೆ. 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಅಂಗೀಕಾರದಲ್ಲಿನ ವಿಳಂಬದಿಂದಾಗಿ, ನಾಗರಿಕರು ತಮ್ಮ ಅಪಾರ್ಟ್‌ಮೆಂಟ್‌ಗಳನ್ನು ನಿರ್ವಹಿಸಲು, ವಿವಾದಗಳನ್ನು ಪರಿಹರಿಸಿಕೊಳ್ಳಲು ಮತ್ತು ಮಾಲೀಕತ್ವದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಕಾನೂನು ಚೌಕಟ್ಟಿಲ್ಲದೆ ಪರದಾಡುವಂತಾಗಿದೆ. ಕರ್ನಾಟಕದಾದ್ಯಂತ ಲಕ್ಷಾಂತರ ಅಪಾರ್ಟ್‌ಮೆಂಟ್‌ ಮಾಲೀಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪ್ರಸ್ತುತ ಬಜೆಟ್ ಅಧಿವೇಶನದಲ್ಲೇ ಈ ಕಾಯ್ದೆಯನ್ನು ಅಂಗೀಕರಿಸುವಂತೆ ನಾವು ಸನ್ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಎಲ್ಲಾ ಶಾಸಕರಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ,” ಎಂದು 𝗕𝗔𝗙 ಅಧ್ಯಕ್ಷರಾದ ಸತೀಶ್ ಮಲ್ಯ ತಿಳಿಸಿದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (𝗕𝗦𝗪𝗠𝗟) ಇತ್ತೀಚೆಗೆ ನೀಡಿರುವ ನೋಟಿಸ್‌ಗಳ ಬಗ್ಗೆಯೂ ಫೆಡೆರೇಷನ್ ತೀವ್ರ ಕಳವಳ ವ್ಯಕ್ತಪಡಿಸಿತು. ಜನವರಿ 𝟮𝟬𝟮𝟲 ರ ಮಧ್ಯಭಾಗದಿಂದ, ಹೊಸ ನಿಯಮಗಳ ಅಡಿಯಲ್ಲಿ 𝟭𝟬𝟬 ಕ್ಕೂ ಹೆಚ್ಚು ಘಟಕಗಳಿರುವ (𝘂𝗻𝗶𝘁𝘀) ಅಪಾರ್ಟ್‌ಮೆಂಟ್‌ಗಳಲ್ಲಿನ ಘನತ್ಯಾಜ್ಯದ ಮೇಲಿನ ಬಳಕೆದಾರರ ಶುಲ್ಕವನ್ನು ವಿಧಿಸಲು ಅವುಗಳನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ (𝗕𝘂𝗹𝗸 𝗪𝗮𝘀𝘁𝗲 𝗚𝗲𝗻𝗲𝗿𝗮𝘁𝗼𝗿𝘀) ಎಂದು ಅನ್ಯಾಯವಾಗಿ ವರ್ಗೀಕರಿಸಲಾಗಿದೆ.

𝟮𝟬𝟬𝟬 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಸ್ವತಂತ್ರ ಮನೆಯೊಂದು ಆಸ್ತಿ ತೆರಿಗೆಯ ಮೂಲಕ ತಿಂಗಳಿಗೆ ಕೇವಲ 𝟭𝟬𝟬 ರೂಪಾಯಿಗಳ ನಾಮಮಾತ್ರ ಶುಲ್ಕವನ್ನು ಪಾವತಿಸುತ್ತಿದ್ದರೆ, ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೆ ಪ್ರತಿ ಕೆಜಿಗೆ 𝟭𝟮 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದರ ಜೊತೆಗೆ ಶೇ. 𝟭𝟴 ರಷ್ಟು 𝗚𝗦𝗧 (𝟭𝟴% 𝗚𝗦𝗧) ಹೊರೆಯೂ ಸೇರಿ, ಪ್ರತಿ ಫ್ಲಾಟ್‌ಗೆ ತಿಂಗಳಿಗೆ ಸರಿಸುಮಾರು 𝟯𝟲𝟬 ರೂಪಾಯಿಗಳಷ್ಟು ಶುಲ್ಕ ಬೀಳುತ್ತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ವೆಚ್ಚದಲ್ಲಿ ಬರೋಬ್ಬರಿ ಶೇ. 𝟲𝟬𝟬 (𝟲𝟬𝟬%) ರಷ್ಟು ಹೆಚ್ಚಳವಾದಂತಾಗಿದೆ. 𝟱𝟬𝟬-ಘಟಕಗಳಿರುವ ಅಪಾರ್ಟ್‌ಮೆಂಟ್‌ಗೆ ಇದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳ ಹೆಚ್ಚುವರಿ ಹೊರೆಯಾಗಲಿದೆ.

“ನಮ್ಮ ಸಮುದಾಯಗಳು ಸುಸ್ಥಿರ ಕಸನಿರ್ವಹಣೆಗೆ ಬದ್ಧವಾಗಿವೆ ಮತ್ತು 𝟮𝟬𝟭𝟲 ರಿಂದಲೂ ಹಸಿ ಕಸದ ನಿರ್ವಹಣೆ ಮತ್ತು ಮೂಲದಲ್ಲೇ ಕಸ ವಿಂಗಡಣೆಯನ್ನು ಪಾಲಿಸುತ್ತಿವೆ. ಆದಾಗ್ಯೂ, ಅತಿರೇಕದ ಶುಲ್ಕಗಳೊಂದಿಗೆ ನಮಗೆ ದಂಡ ವಿಧಿಸುವುದು ಮತ್ತು ಫ್ಲಾಟ್‌ಗಳಲ್ಲಿ ವಾಸಿಸುವ ಕುಟುಂಬಗಳನ್ನು ಇಂಡಿಪೆಂಡೆಂಟ್‌ ಮನೆಗಳಲ್ಲಿ ವಾಸಿಸುವವರಿಗಿಂತ ಭಿನ್ನವಾಗಿ ಪರಿಗಣಿಸುವುದು ತೀವ್ರ ತಾರತಮ್ಯವಾಗಿದೆ. ಸಂಘಗಳೇ ತ್ಯಾಜ್ಯ ಸಂಸ್ಕರಣಾ ಘಟಕಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸುವ ಬದಲು, 𝗕𝗦𝗪𝗠𝗟 ನೇರವಾಗಿ ಅಪಾರ್ಟ್‌ಮೆಂಟ್‌ಗಳಿಂದ ಯಾವುದೇ 𝗚𝗦𝗧 ಇಲ್ಲದೆ ಸಮಾನತೆಯ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬೇಕು ಮತ್ತು ತ್ಯಾಜ್ಯ ಸಂಸ್ಕರಣುದಾರರನ್ನು ನೇರವಾಗಿ ನೇಮಿಸಬೇಕು. ನಮ್ಮ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಗಾಗಿ ನಮಗೆ ಗ್ರೀನ್ ಕ್ರೆಡಿಟ್‌ಗಳು (𝗚𝗿𝗲𝗲𝗻 𝗖𝗿𝗲𝗱𝗶𝘁𝘀) ಬೇಕೇ ಹೊರತು ಆರ್ಥಿಕ ದಂಡನೆಗಳಲ್ಲ,” ಎಂದು 𝗕𝗔𝗙 ಪದಾಧಿಕಾರಿಗಳು ಆಗ್ರಹಿಸಿದರು.

ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಸರ್ಕ್ಯುಲರ್ ಎಕಾನಮಿಯನ್ನು (𝗖𝗶𝗿𝗰𝘂𝗹𝗮𝗿 𝗘𝗰𝗼𝗻𝗼𝗺𝘆) ಉತ್ತೇಜಿಸಲು 𝗕𝗔𝗙 ಈ ಕೆಳಗಿನ ತುರ್ತು ಕ್ರಮಗಳನ್ನು ಪ್ರಸ್ತಾಪಿಸಿದೆ:
– 𝗚𝗦𝗧 ಸೋರಿಕೆಯನ್ನು ತಡೆಗಟ್ಟಲು ಅಪಾರ್ಟ್‌ಮೆಂಟ್‌ಗಳಿಂದ ನೇರವಾಗಿ ವೆಂಡರ್‌ಗಳಿಗೆ ಪಾವತಿಸುವ ವ್ಯವಸ್ಥೆಯನ್ನು ರದ್ದುಗೊಳಿಸಬೇಕು.
– ಕಾಂಪೋಸ್ಟ್ ಬೈ-ಬ್ಯಾಕ್ (𝗖𝗼𝗺𝗽𝗼𝘀𝘁 𝗕𝘂𝘆-𝗯𝗮𝗰𝗸) ವ್ಯವಸ್ಥೆಯನ್ನು ಪರಿಚಯಿಸಬೇಕು.
– ಯಾವುದೇ ಬೆಲೆ ಬದಲಾವಣೆಗಳನ್ನು ಜಾರಿಗೊಳಿಸುವ ಮೊದಲು ಪಾರದರ್ಶಕವಾಗಿ ಸಂಘಗಳೊಂದಿಗೆ ಸಮಾಲೋಚನೆ ನಡೆಸಬೇಕು.

ಪತ್ರಿಕಾಗೋಷ್ಠಿಯಲ್ಲಿ 𝗕𝗔𝗙 ಅಧ್ಯಕ್ಷರಾದ ಸತೀಶ್ ಮಲ್ಯ, ಉಪಾಧ್ಯಕ್ಷರಾದ ಪ್ರದೀಪ್ ಪೈ, ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, ಆಡಳಿತ ಮಂಡಳಿ ಸದಸ್ಯ ಹಾಗೂ ಲೀಡ್ ಕಮ್ಯುನಿಕೇಷನ್ಸ್ ನ ವಿಶ್ವ ವೆಂಕಟ ರೆಡ್ಡಿ ಉಪಸ್ಥಿತರಿದ್ದರು.

BREAKING: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್​​ ‌ಮುಂದೂಡಿಕೆ

ಮಂಡ್ಯದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ ಕೊರತೆ ಇಲ್ಲ: ಡಿಸಿ ಡಾ.ಕುಮಾರ್ ಮಾಹಿತಿ

Share. Facebook Twitter LinkedIn WhatsApp Email

Related Posts

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ, ಶಿಕ್ಷಣ ಸಚಿವರು ಮತ್ತು ಗಣ್ಯರು

17/03/2026 3:28 PM2 Mins Read

‘LPG’ ಗ್ರಾಹಕರೇ ಗಮನಿಸಿ: ಗ್ಯಾಸ್ ಇಕೆವೈಸಿ (e-KYC) ಎಲ್ಲರಿಗೂ ಕಡ್ಡಾಯವೇ? ಇಲ್ಲಿದೆ ಅಸಲಿ ಮಾಹಿತಿ!

17/03/2026 3:13 PM1 Min Read

BREAKING : ಪ್ರೇಮ್ ನಿರ್ದೇಶನದ ‘KD’ ಸಿನೆಮಾಗೆ ಸಂಕಷ್ಟ : ‘ಸರ್ಸೆ ನಿನ್ನ ಸೆರಗ’ ಹಾಡಿನ ವಿರುದ್ಧ ಸೆನ್ಸಾರ್ ಮಂಡಳಿಗೆ ದೂರು

17/03/2026 3:05 PM1 Min Read
Recent News

BREAKING : ರಾತ್ರೋರಾತ್ರಿ ನಡೆದ ದಾಳಿಯಲ್ಲಿ ಇರಾನ್ ಭದ್ರತಾ ಮುಖ್ಯಸ್ಥ ‘ಅಲಿ ಲಾರಿಜಾನಿ’ ಹತ್ಯೆ ; ಇಸ್ರೇಲ್

17/03/2026 3:28 PM

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ, ಶಿಕ್ಷಣ ಸಚಿವರು ಮತ್ತು ಗಣ್ಯರು

17/03/2026 3:28 PM

ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ 𝗕𝗔𝗙 ಆಗ್ರಹ

17/03/2026 3:20 PM

‘LPG’ ಗ್ರಾಹಕರೇ ಗಮನಿಸಿ: ಗ್ಯಾಸ್ ಇಕೆವೈಸಿ (e-KYC) ಎಲ್ಲರಿಗೂ ಕಡ್ಡಾಯವೇ? ಇಲ್ಲಿದೆ ಅಸಲಿ ಮಾಹಿತಿ!

17/03/2026 3:13 PM
State News
KARNATAKA

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ, ಶಿಕ್ಷಣ ಸಚಿವರು ಮತ್ತು ಗಣ್ಯರು

By kannadanewsnow0917/03/2026 3:28 PM KARNATAKA 2 Mins Read

ಬೆಂಗಳೂರು: ನಾಳೆಯಿಂದ (ಮಾರ್ಚ್ 18) ರಿಂದ ಏಪ್ರಿಲ್ 2ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲಾ…

ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ 𝗕𝗔𝗙 ಆಗ್ರಹ

17/03/2026 3:20 PM

‘LPG’ ಗ್ರಾಹಕರೇ ಗಮನಿಸಿ: ಗ್ಯಾಸ್ ಇಕೆವೈಸಿ (e-KYC) ಎಲ್ಲರಿಗೂ ಕಡ್ಡಾಯವೇ? ಇಲ್ಲಿದೆ ಅಸಲಿ ಮಾಹಿತಿ!

17/03/2026 3:13 PM

BREAKING : ಪ್ರೇಮ್ ನಿರ್ದೇಶನದ ‘KD’ ಸಿನೆಮಾಗೆ ಸಂಕಷ್ಟ : ‘ಸರ್ಸೆ ನಿನ್ನ ಸೆರಗ’ ಹಾಡಿನ ವಿರುದ್ಧ ಸೆನ್ಸಾರ್ ಮಂಡಳಿಗೆ ದೂರು

17/03/2026 3:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.