ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೊಲೀಸ್ ಅದೀಕ್ಷಕರಾದ ಶಿವಕುಮಾರ್ ಅವರು ವರ್ಗಾವಣೆ ಮಾಡಿದರೂ ಹೋಗದೆ ಇರೋ ಪೇದೆಯ ಸುದ್ದಿಯನ್ನು ನಿಮ್ಮ ಕನ್ನಡ ನ್ಯೂಸ್ ನೌ ಹಾಕಿದ ಕೂಡಲೆ ಇಲಾಖೆ ಎಚ್ಚೆತ್ತು ವರ್ಗಾವಣೆ ಆದ ಸ್ಥಳಕ್ಕೆ ಹೋಗಿ ಕರ್ತವ್ಯಕ್ಕೆ ಹಾಜರಾಗುವಂತೆ ಪೇದೆಗೆ ಸೂಚಿಸಿದೆ. ಕೂಡಲೇ ಪೇದೆ ಸಂಚಾರಿ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎನ್ನಲಗಿದೆ.
ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ನಟರಾಜು ಎಂಬಾತ ಜೂನ್ ಅಲ್ಲಿ ವರ್ಗಾವಣೆ ಆದರೂ ಹೋಗದೆ ಠಾಣೆಯ ಇನ್ಸ್ ಪೆಕ್ಟರ್ ಬೆಂಬಲಕ್ಕಿದ್ದಾರೆ ಎಂದು ಸಂಚಾರಿ ಠಾಣೆಗೆ ವರ್ಗವಣೆ ಆಗಿ ಆರೇಳು ತಿಂಗಳಾದರೂ ಹೋಗದೆ ಮೊಂಡುತನ ಪ್ರದರ್ಶನ ಮಾಡಿದ್ದರು. ಜೊತೆಗೆ ಎಸ್ಪಿ ಶಿವಕುಮಾರ್ ಕೂಡ ಮೌನವಾಗಿದ್ದರು. ಈ ಸುದ್ದಿ ನವೆಂಬರ್ 22 ರಂದು ಬಿತ್ತರ ಕೂಡ ಮಾಡಲಾಗಿತ್ತು. ಸುದ್ದಿಗೆ ತಡವಾಗಿ ಎಚ್ಚೆತ್ತ ಚಾಮರಾಜನಗರ ಪೊಲೀಸ್ ಇಲಾಖೆ ವರ್ಗಾವಣೆ ಆದ ಸ್ಥಳಕ್ಕೆ ಹೋಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಕನ್ನಡ ನ್ಯೂಸ್ ನೌ.ವರ್ಗಾವಣೆ ಮಾಡಿದರೂ ಕ್ಯಾರೆ ಎನ್ನದ ಕೆಲ ಸಿಬ್ಬಂದಿ,ಎಸ್ಪಿ ಆದೇಶಗಳೆಲ್ಲ,ಬಿಳಿ ಹಾಳೆಗಷ್ಟೆ ಸೀಮಿತ! ಎಂದು ಸುದ್ದಿ ಪ್ರಕಟಿಸಿ ಪೊಲೀಸ್ ಇಲಾಖೆ ಗಮನ ಸೆಳೆಯಲಾಗಿತ್ತು. ಇದೀಗ ಪೇದೆ ವರ್ಗಾವಣೆಯಾದ ಸ್ಥಳಕ್ಕೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ