ಬೆಂಗಳೂರು: ನಗರದಲ್ಲಿ ಸ್ವಲ್ಪ ದಿನಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆರಾಯ ಇದೀಗ ಮತ್ತೆ ಶುರುವಾಗಿದೆ.
BREAKING NEWS : ತಾರಕಕ್ಕೇರಿದ ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ : ಡಿ.19 ಕ್ಕೆ ‘MES’ ನಿಂದ ‘ಮಹಾಮೇಳಾವ್’ ಆಯೋಜನೆ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಇದರಿಂದ ಬೆಂಗಳೂರಿನಲ್ಲೂ ಬೆಳ್ಳಂಬೆಳಗ್ಗೆ ತುಂತುರು ಮಳೆ ಶುರುವಾಗಿದೆ. ಇಂದಿನಿಂದ ಡಿ.12ರವರೆಗೆ ಮಳೆ ಸುರಿಯಲಿದೆ. ಮ್ಯಾಂಡಸ್ ಚಂಡಮಾರುತದ ಪರಿಣಾಮದಿಂದ ಬೆಳಂಗಳೂರಿನ ತಾಪಮಾನ ಮತ್ತು ವಿಪರೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಶಾನ್ಯ ಮಾನ್ಸೂನ್ ಇನ್ನೂ ಮುಗಿಯದ ಕಾರಣ ಮುಂದಿನ 4 ದಿನಗಳ ಕಾಲ ಬೆಂಗಳೂರಿನಲ್ಲೂ ಮಳೆ ಬೀಳಬಹುದು ಎಂದು ಪ್ರಕಟಣೆ ತಿಳಿಸಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯಾಗುವ ಸಾಧ್ಯತೆ ಇದೆ.