ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಬರುವ ವಾಹನ ಸವಾರರಿಗೆ ಮೈಸೂರಿನ ಸಂಚಾರ ಪೊಲೀಸರು ಬಹುಮುಖ್ಯ ಮಾಹಿತಿ ನೀಡಿದ್ದಾರೆ.
ಪ್ರವಾಸಿಗರಿಗೆ, ಸಾರ್ವುಜನಿಕರಿಗೆ ಮೈಸೂರಿನ ದೀಪಾಲಂಕಾರ ವೀಕ್ಷಣೆಗೆ ಅಡ್ಡಿಯಾಗದಂತೆ ಕೆಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಮೈಸೂರಿನಲ್ಲಿ ವಿವಿಧ ಪ್ರದೇಶದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ 11 ವರೆಗೆ ವಾಹನ ನಿರ್ಬಂಧ ವಿಧಿಸಲಾಗಿದೆ, ಮೈಸೂರಿನ ಹಬ್ ಗೌಸ್ ಸರ್ಕಲ್, ಕುಸ್ತಿ ಅಖಾಡ ಜಂಕ್ಷನ್, ಹಾರ್ಡಿಂಜ್ ಸರ್ಕಲ್, ಓಲ್ಡ್ ಸ್ಟ್ಯಾಚು ಸರ್ಕಲ್, ಕೆ ಆರ್ ಸರ್ಕಲ್, ಕಾರ್ಪೊರೇಷನ್ ಸರ್ಕಲ್ ನಲ್ಲಿ ವಾಹನ ಸಂಚಾರ ಮಾಡದಂತೆ ಪೊಲೀಸರು ಅಧಿಕೃತವಾಗಿ ನಿರ್ಬಂಧ ವಿಧಿಸಿದ್ದಾರೆ.
ಮೈಸೂರು ದಸರಾ ವೀಕ್ಷಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತೆರಳುವಂತ ಪ್ರವಾಸಿಗರಿಗಾಗಿ, ಕೆ ಎಸ್ ಆರ್ ಟಿ ಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್ ( KSRTC Special Bus ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ದಸರಾ ರಜೆಯ ( Dasara Holiday ) ಸಂದರ್ಭದಲ್ಲಿ ವಿವಿಧ ಪ್ರವಾಸಿ, ಧಾರ್ಮಿಕ ಸ್ಥಳಗಳಿಗೆ ತೆರಳೋ ಪ್ರಯಾಣಿಕರಿಗೂ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಿದೆ. ಈ ಮೂಲಕ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ: ಪುತ್ರನ ಅಂಗಾಂಗ ದಾನ ಮಾಡಿ, ಇಬ್ಬರಿಗೆ ಜೀವದಾನ