ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಪ್ರಿಯಕರನ ಜೊತೆ ಸೇರಿಕೊಂಡ ತನ್ನ ಗಂಡನನ್ನು ಪತ್ನಿಯೇ ಕೊಲೆ ಮಾಡಿದ ಘಟನೆ ನಡೆದಿದೆ.
BIGG NEWS: ಶಿವಮೊಗ್ಗಕ್ಕೆ ಉಗ್ರರ ನಂಟು: ಇಬ್ಬರ ವಿರುದ್ಧ ಯುಎಪಿಎ ಕೇಸ್ ದಾಖಲು; SP ಲಕ್ಷ್ಮೀ ಪ್ರಸಾದ್
ಪಾಂಡಪ್ಪ ಜಟಕನ್ನವರ ಮೃತ ದುರ್ದೈವಿ. ತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಆಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್ ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ಸ್ಕೆಚ್ ಹಾಕಿಕೊಂಡಿದ್ದಾಳೆ.
BIGG NEWS: ಶಿವಮೊಗ್ಗಕ್ಕೆ ಉಗ್ರರ ನಂಟು: ಇಬ್ಬರ ವಿರುದ್ಧ ಯುಎಪಿಎ ಕೇಸ್ ದಾಖಲು; SP ಲಕ್ಷ್ಮೀ ಪ್ರಸಾದ್
ಈ ಪ್ರಕಾರವಾಗಿಯೇ ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ಜಗಳ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿತ್ತು. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದಾಳೆ. ಇದರಿಂದಾಗಿ ಪಾಂಡಪ್ಪನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರುಸೇತುವೆ ಬಳಿ ಎಸೆಯಲಾಗಿತ್ತು.