ಬೆಂಗಳೂರು: ಮುಂಗಾರು ಮಳೆ ಆರಂಭಟ ರಾಜ್ಯಾಧ್ಯಂತ ಜೋರಾಗಿದೆ. ಕರಾವಳಿ ಭಾಗದ ಮಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನ ಜೀವನವೇ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ರಾಜ್ಯಾಧ್ಯಂತ ಜುಲೈ.5ರವರೆಗೆ ಭಾರೀ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

BREAKING NEWS: ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯಲ್ಲಿ ಮಹತ್ವದ ಯೋಜನೆಗಳಿಗೆ ಒಪ್ಪಿಗೆ: ಇಲ್ಲಿದೆ ಹೈಲೈಟ್ಸ್

ಈ ಬಗ್ಗೆ ಮಾಹಿತಿ ನೀಡಿರುವಂತ ರಾಜ್ಯ ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ಕಾರಣ ಇಂದು ಮತ್ತು ಜುಲೈ.5ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಮಳೆಯಿಂದ ನಲುಗಿರುವಂತ ಕರಾವಳಿ ಜಿಲ್ಲೆಗಳಲ್ಲಿ ಜುಲೈ.5ರವರೆಗೆ ವರಣ ಆರ್ಭಟಿಸಲಿದ್ದಾನೆ ಎಂದು ತಿಳಿಸಿದೆ.

BREAKING NEWS: ರಾಜ್ಯದ ‘ಪೌರಕಾರ್ಮಿಕ’ರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಮಾಸಿಕ ‘2 ಸಾವಿರ ಸಂಕಷ್ಟ ಪರಿಹಾರ ಭತ್ಯೆ’

ಇನ್ನೂ ನೈರುತ್ಯ ಮುಂಗಾರು ಮಳೆ ಚುರುಕುಗೊಂಡಿದ್ದು, ಇದರ ಸುಳಿಗಾಳಿಯ ಪರಿಣಾಮದಿಂದಾಗಿ ಕರಾವಳಿ ಭಾಗದ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಗಾಲಿದೆ ಎಂದು ತಿಳಿಸಿದೆ.

BIGG NEWS : ಜುಲೈ 4 ರಂದು ಆಂಧ್ರಪ್ರದೇಶ, ಗುಜರಾತ್​ನ​​ ಗಾಂಧಿನಗರಕ್ಕೆ ಪ್ರಧಾನಿ ಮೋದಿ ಭೇಟಿ : ಹಲವು ಕಾರ್ಯಕ್ರಮಗಳಲ್ಲಿ ಭಾಗಿ | PM Modi to visit AP,Gujarat

40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಜೊತೆಗೆ ಬೆಂಗಳೂರಿನಲ್ಲಿಯೂ ಐದು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.

Share.
Exit mobile version