ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಇಂದಿನ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಸಚಿವ ಮಾಧುಸ್ವಾಮಿಯವರು, ಹಟ್ಟಿಗೋಲ್ಡ್ ಮೈನ್ಸ್ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮತ್ತೊಂದು ಕಡೆ ಡಿಗ್ಗಿಂಗ್ ಮಾಡಲು 307 ಕೋಟಿ ಹಣವನ್ನ ನೀಡಲಾಗಿದೆ ಎಂದರು.

BREAKING NEWS: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 46 ಡಿವೈಎಸ್ಪಿ ವರ್ಗಾವಣೆಗೊಳಿಸಿ ಆದೇಶ | DYSP Officer Transfer

436 ನಮ್ಮಕ್ಲಿನಿಕ್ ಯೋಜನೆಗೆ ಒಪ್ಪಿಗೆ ಸೂಚಸಿಲಾಗಿದೆ. 438 ವೈದ್ಯಾಧಿಕಾರಿ, 438 ನರ್ಸ್ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. 438 ದ್ವಿತೀಯ ದರ್ಜೆ ಸಹಾಯಕರ ನೇಮಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅನುಮತಿಸಲಾಗಿದೆ. ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ 103 ಕೋಟಿ ಹಣ ನೀಡಲಾಗ್ತಿದೆ ಎಂದರು.

ಮುರುಘಾಮಠದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಿದ್ದೆವು. 20 ಕೋಟಿ ಅನುದಾನವನ್ನ ನೀಡಲಾಗಿತ್ತು. ಉಳಿದ 10 ಕೋಟಿ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದರು.

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಚಿಕ್ಕೋಡಿಯಲ್ಲಿ 32 ಕೋಟಿ ಅನುದಾನ ನೀಡಲಾಗಿದೆ.  ಮೂಡಿಗೆರೆ ಕೋರ್ಟ್ ನಿರ್ಮಾಣಕ್ಕೆ 12 ಕೋಟಿ, ಕೋಲಾರ ಜಿಲ್ಲಾ ಕೋರ್ಟ್ ಸಂಕೀರ್ಣಕ್ಕೆ 22 ಕೋಟಿ, ಶ್ರೀನಿವಾಸಪುರದಲ್ಲಿ ಕೋರ್ಟ್ ಸಂಕಿರ್ಣಕ್ಕೆ 12 ಕೋಟಿ, ಬಳ್ಳಾರಿ ನ್ಯಾಯಾಲಯಸಂಕೀರ್ಣ ನಿರ್ಮಾಣಕ್ಕೆ 121 ಕೋಟಿ, ಕುಂದಗೋಳದಲ್ಲಿ ಕೋರ್ಟ್ ಕಟ್ಟಡಕ್ಕೆ 32 ಕೋಟಿ, ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದರು.

Health tips : ಕೇವಲ ‘ಅರಿಶಿಣ’ ಮಾತ್ರವಲ್ಲ, ಅದರ ನೀರಿನಲ್ಲಿಯೂ ಇವೆ ಅನೇಕ ಆರೋಗ್ಯ ಪ್ರಯೋಜನಗಳು | Turmeric Water benefits

ಜಾವಗಲ್ ರಸ್ತೆ ನಿರ್ಮಾಣಕ್ಕೆ 22.20 ಕೋಟಿ ನೀಡಲಾಗಿದೆ. ಸಿರ್ಸಿ ಬ್ಲಾಕ್ ಸ್ಪಾಟ್ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಬೆಳಗಾವಿಯಲ್ಲಿ ಅಂಗಡಿ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಬಾಡಿಗೆ ಆಧಾರದಲ್ಲಿ ಮಳಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆ ಲೀಸ್ ಗೆ ನೀಡಲಾಗಿತ್ತು. ನಿರಾಣಿ ಶುಗರ್ಸ್ ಗೆ ಲೀಸ್ ನೀಡಲಾಗಿತ್ತು. 24 ಕೋಟಿ ಸ್ಟಾಂಪ್ ಡ್ಯೂಟಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಕಾರ್ಖಾನೆ ನಡೆಸಲು ಆಗಲ್ಲವೆಂದಿದ್ದರು. ಹೀಗಾಗಿ ಬಡ್ಡಿ ರಹಿತ ಸಾಲ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದರು.

ಕೋಟಿಕಾರ್ ಪಟ್ಟಣ ಪಂಚಾಯ್ತಿ 24 ಕುಡಿಯುವ ನೀರು ಸರಬರಾಜಿಗಾಗಿ 224 ಕೋಟಿ ಹಣ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಲು ನಿರ್ಧಾರಿಸಲಾಗಿದೆ. ಮಾಸಿಕ 2000 ಸಂಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ಎಲ್ಲಾ ಪೌರಕಾರ್ಮಿಕರಿಗೂ ಇದು ಸಿಗಲಿದೆ ಎಂದರು.

3 ಗುಂಟೆ ಜಮೀನನ್ನ ಕನ್ನಡ ಸಾಹಿತ್ಯ ಪರಿಷತ್ ಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಜೆಎಸ್ ಎಸ್ ಸಂಸ್ಥೆಗೆ 9 ಎಕರೆ ಜಮೀನು ಮಂಜೂರು ಮಾಡಲಾಗಿದೆ. ದಾವಣಗೆರೆಯ ದೊಡ್ಡಬಾತಿಯಲ್ಲಿ ನೀಡಲು ಸಮ್ಮತಿ ನೀಡಲಾಗಿದೆ ಎಂದರು.

BREAKING NEWS: ಜು.7ರಂದು ರಾಜ್ಯ ‘ಆರೋಗ್ಯ ಇಲಾಖೆ’ಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಂದ ‘ಬೆಂಗಳೂರು ಚಲೋ’ ನಿಶ್ಚಿತ – ಅಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಯಾದಗಿರಿ ಜಿಲ್ಲೆ ಕುಡಿಯುವ ನೀರು ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. 2054 ಕೋಟಿ ಹಣ ಮಂಜೂರು ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರು, ಬೋರನಕಣಿವೆಯಿಂದ ನೀರು ಪೂರೈಕೆಗಾಗಿ 435 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಮುದ್ದೆಬಿಹಾಳ, ಸಿಂದಗಿ ಕುಡಿಯುವ ನೀರು ಪೂರೈಕೆಗೆ ಅನುಮತಿ ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುದಾನ ನೀಡಲಾಗಿದೆ. 1385 ಕೋಟಿ ಅನುದಾನ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೀರು ಸರಬರಾಜಿಗೆ ಅನುದಾನ ನೀಡಲಾಗಿದೆ. 33 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಬಸವಕಲ್ಯಾಣ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗಾಗಿ 99.64 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

BIGG NEWS : ಜುಲೈ 4 ರಂದು ಆಂಧ್ರಪ್ರದೇಶ, ಗುಜರಾತ್​ನ​​ ಗಾಂಧಿನಗರಕ್ಕೆ ಪ್ರಧಾನಿ ಮೋದಿ ಭೇಟಿ : ಹಲವು ಕಾರ್ಯಕ್ರಮಗಳಲ್ಲಿ ಭಾಗಿ | PM Modi to visit AP,Gujarat

ಸವಣೂರು, ಶಿಗ್ಗಾಂವಿ ಗ್ರಾಮಗಳಿಗೆ ನೀರು ಯೋಜನೆಗಾಗಿ 830 ಕೋಟಿ ಅನುದಾನ ನೀಡಲು ಅನುಮತಿ ನೀಡಲಾಗಿದೆ. ಹಾನಗಲ್ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆಗಾಗಿ 335 ಕೋಟಿ ಅನುದಾನ ನೀಡಲು ಸಮ್ಮತಿಸಲಾಗಿದೆ. ಹಾವೇರಿ 51 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗಾಗಿ 150 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಅಧಿವೇಶನ ಮುಂದಿನ ತಿಂಗಳು ನಡೆಯಲಿದೆ. ಇವತ್ತು ಚರ್ಚೆಗೆ ಬಂದಿತ್ತು. ಆದರೆ ಮುಂದಿನ ತಿಂಗಳಿಗೆ ಹಾಕಿದ್ದೇವೆ. ದಿನಾಂಕ ನಿಗದಿಯಾಗಿಲ್ಲ ಎಂದರು.

ಸಿಐಡಿ ತನಿಖೆಗೆ ಹೈಕೋರ್ಟ್ ಆಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಎಸಿಬಿಯವರು ಎಫ್ ಐಆರ್ ಹಾಕಿದ್ದರು. ಅದರ ಆಧಾರದ ಮೇಲೆ ಜಡ್ಜ್ ಮಾತನಾಡಿದ್ದಾರೆ. ಕೋರ್ಟ್ ನಲ್ಲಿದ್ದಿದ್ದು ಬೇಲ್ ಅಪ್ಲಿಕೇಶನ್ ಅಷ್ಟೇ. ನಾನು ಅದರ ಬಗ್ಗೆ ಮಾತನಾಡಲ್ಲ. ಕೋರ್ಟ್ ದೊಡ್ಡವರನ್ನ ಬಿಡ್ತೀರ ಅಂತ ಹೇಳಿದೆ. ನಾವು ಅದರ ಬಗ್ಗೆ ಮಾತನಾಡಲ್ಲ ಎಂದರು.

Share.
Exit mobile version