ಬೆಂಗಳೂರು: ಪೌರಕಾರ್ಮಿಕರು ( Pourakarmikas ) ಇಂದಿನಿಂದ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ವಚ್ಛತಾ ಕಾರ್ಯವನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ಮಾಸಿಕ ಸಂಕಷ್ಟ ಪರಿಹಾರ ಭತ್ಯೆಯಾಗಿ ರೂ.2,000 ನೀಡುವುದಾಗಿ ಘೋಷಿಸಿದೆ. ಇದಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ಸೂಚಿಸಿ, ಗುಡ್ ನ್ಯೂಸ್ ನೀಡಿದೆ.

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ಜೆ.ಸಿ ಮಾಧುಸ್ವಾಮಿಯವರು ( Minister JC Madhuswamy ), ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಲು ನಿರ್ಧಾರಿಸಲಾಗಿದೆ. ಮಾಸಿಕ 2000 ಸಂಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ಎಲ್ಲಾ ಪೌರಕಾರ್ಮಿಕರಿಗೂ ಇದು ಸಿಗಲಿದೆ ಎಂದರು.

BREAKING NEWS: ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯಲ್ಲಿ ಮಹತ್ವದ ಯೋಜನೆಗಳಿಗೆ ಒಪ್ಪಿಗೆ: ಇಲ್ಲಿದೆ ಹೈಲೈಟ್ಸ್

436 ನಮ್ಮಕ್ಲಿನಿಕ್ ಯೋಜನೆಗೆ ಒಪ್ಪಿಗೆ ಸೂಚಸಿಲಾಗಿದೆ. 438 ವೈದ್ಯಾಧಿಕಾರಿ, 438 ನರ್ಸ್ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. 438 ದ್ವಿತೀಯ ದರ್ಜೆ ಸಹಾಯಕರ ನೇಮಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅನುಮತಿಸಲಾಗಿದೆ. ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ 103 ಕೋಟಿ ಹಣ ನೀಡಲಾಗ್ತಿದೆ ಎಂದರು.

ಮುರುಘಾಮಠದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಿದ್ದೆವು. 20 ಕೋಟಿ ಅನುದಾನವನ್ನ ನೀಡಲಾಗಿತ್ತು. ಉಳಿದ 10 ಕೋಟಿ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದರು.

BIGG NEWS : ಜುಲೈ 4 ರಂದು ಆಂಧ್ರಪ್ರದೇಶ, ಗುಜರಾತ್​ನ​​ ಗಾಂಧಿನಗರಕ್ಕೆ ಪ್ರಧಾನಿ ಮೋದಿ ಭೇಟಿ : ಹಲವು ಕಾರ್ಯಕ್ರಮಗಳಲ್ಲಿ ಭಾಗಿ | PM Modi to visit AP,Gujarat

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಚಿಕ್ಕೋಡಿಯಲ್ಲಿ 32 ಕೋಟಿ ಅನುದಾನ ನೀಡಲಾಗಿದೆ.  ಮೂಡಿಗೆರೆ ಕೋರ್ಟ್ ನಿರ್ಮಾಣಕ್ಕೆ 12 ಕೋಟಿ, ಕೋಲಾರ ಜಿಲ್ಲಾ ಕೋರ್ಟ್ ಸಂಕೀರ್ಣಕ್ಕೆ 22 ಕೋಟಿ, ಶ್ರೀನಿವಾಸಪುರದಲ್ಲಿ ಕೋರ್ಟ್ ಸಂಕಿರ್ಣಕ್ಕೆ 12 ಕೋಟಿ, ಬಳ್ಳಾರಿ ನ್ಯಾಯಾಲಯಸಂಕೀರ್ಣ ನಿರ್ಮಾಣಕ್ಕೆ 121 ಕೋಟಿ, ಕುಂದಗೋಳದಲ್ಲಿ ಕೋರ್ಟ್ ಕಟ್ಟಡಕ್ಕೆ 32 ಕೋಟಿ, ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದರು.

BREAKING NEWS: ಜು.7ರಂದು ರಾಜ್ಯ ‘ಆರೋಗ್ಯ ಇಲಾಖೆ’ಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಂದ ‘ಬೆಂಗಳೂರು ಚಲೋ’ ನಿಶ್ಚಿತ – ಅಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

Share.
Exit mobile version