ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಳದಿ ಎಚ್ಚರಿಕೆಯು ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚಿಸುತ್ತದೆ.ಮಳೆ ಜೊತೆಗೆ ಬಾರೀ ಗಾಳಿ ಬೀಸುವ ಸಾಧ್ಯತೆ ಇದೆ ಎಂದಿದೆ.
ಏಪ್ರಿಲ್ ಬೇಸಿಗೆಯ ನಂತರ, ಮೇ ತಿಂಗಳಲ್ಲಿ ನಗರದಲ್ಲಿ ಸಾಮಾನ್ಯ ಮಳೆಯಗಾಲಿದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ ೧೨೮.೭ ಮಿ.ಮೀ ಮಳೆಯಾಗುತ್ತದೆ.
ಬೆಂಗಳೂರಲ್ಲಿ ಮೇ 10ರವರೆಗೆ ಮಳೆ
ಆದಾಗ್ಯೂ, ಮುಂದಿನ ಎರಡು ದಿನಗಳಲ್ಲಿ, ಸಂಜೆ ಅಥವಾ ರಾತ್ರಿಯ ವೇಳೆಗೆ ಮಾತ್ರ ಮಿಂಚು ಮತ್ತು ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ನಗರದಲ್ಲಿ ಮೇ ಆರಂಭದಿಂದಲೂ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ತಾಪಮಾನವು ಗಮನಾರ್ಹವಾಗಿ ಕಡಿಮೆಯಾಗಿದೆ. ತಿಂಗಳ ಆರಂಭದಲ್ಲಿ 38 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನವು ಮಂಗಳವಾರ 33.8 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಮಂಗಳವಾರ ಕನಿಷ್ಠ ಒಂದು ತಿಂಗಳಲ್ಲಿ ನಗರವು ಕಂಡ ಅತ್ಯಂತ ತಂಪಾದ ದಿನವಾಗಿದೆ.