ಬೆಂಗಳೂರು : ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ (ಬೃಹತ್ ಮಹಾನಗರ ಪಾಲಿಕೆ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಭಾರೀ ಸುದ್ದಿಯಾದ ವೋಟರ್ ಐಡಿ ಅಕ್ರಮದಲ್ಲಿ ಚಿಲುಮೆ ಸಂಸ್ಥೆ ಭಾಗಿಯಾಗಿತ್ತು. ವೋಟರ್ ಐಡಿ ಪ್ರಕರಣದ ವಿರುದ್ಧ ತನಿಖೆ ನಡೆದಿದ್ದು, ಹಲವಾರು ಜನರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ಚಿಲುಮೆ ಸಂಸ್ಥೆ ವಿರುದ್ಧ ಚುನಾವಣಾ ಆಯೋಗ ಹಾಗೂ ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಿತ್ತು. ಇನ್ನುಮುಂದೆ ಚಿಲುಮೆ ಸಂಸ್ಥೆಗೆ ಯಾವುದೇ ಕಾರ್ಯಕ್ರಮ, ಟೆಂಡರ್ ನೀಡದಂತೆ ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ (ಬೃಹತ್ ಮಹಾನಗರ ಪಾಲಿಕೆ) ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದು, ಈಗಾಗಲೇ ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆಯ ಹಲವಾರು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದೀಗ ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ (ಬೃಹತ್ ಮಹಾನಗರ ಪಾಲಿಕೆ) ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ವೋಟರ್ ಐಡಿ ಅಕ್ರಮ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸುವಂತೆ ವಿಪಕ್ಷಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದವು.
ಮದ್ಯ ಪ್ರಿಯರಿಗೆ ‘ಸ್ಪೆಷಲ್ ಮಾಸ್ಕ್’ ರಿಲೀಸ್ : ಪಬ್, ಬಾರ್ ಗಳಲ್ಲಿ ‘ಮಾಸ್ಕ್’ ಹಾಕಿಕೊಂಡೇ ಎಣ್ಣೆ ಹೊಡೆಯಬಹುದು.!