ಬೆಂಗಳೂರು: ಸಿಗರೇಟ್, ಬೀಡಿ, ಹುಕ್ಕಾ ಬೆನ್ನಲ್ಲೀಗ ಇತ್ತೀಚಿನ ದಿನಗಳಲ್ಲಿ ಯುವ ಜನತೆ e-ಸಿಗರೇಟ್ಗಳಿಗೆ ಮಾರು ಹೋಗಿದ್ದಾರೆ. ರಾಜ್ಯದಲ್ಲೂ e- ಸಿಗರೇಟ್ಗಳಾದ ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, e-ಸಿಗಾರ್, e- ಪೈಪ್ ದಂಧೆ ಜೋರಾಗಿದೆ.
BREAKING NEWS : ‘ಟಿಪ್ಪು ನಿಜ ಕನಸು ನಾಟಕ’ ರಚಿಸಿದ್ದ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ
ಇನ್ನು, ನಿಷೇಧಿತ e-ಸಿಗರೇಟ್ಗಳ ಅಡ್ಡೆ ಮೇಲೆ ಬೆಂಗಳೂರು ಪೊಲೀಸ್ರು ದಾಳಿ ನಡೆಸಿದ್ದಾರೆ. ತಡರಾತ್ರಿ ನಡೆಸಿದ ದಾಳಿ ವೇಳೆ ಸುಮಾರು 50 ಲಕ್ಷಕ್ಕೂ ಹೆಚ್ಚು ಮೌಲ್ಯದ e-ಸಿಗರೇಟ್ ಜಪ್ತಿ ಮಾಡಿದ್ದಾರೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕೋರಮಂಗಲ, ಬಾಣಸವಾಡಿ, ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ.
BREAKING NEWS : ‘ಟಿಪ್ಪು ನಿಜ ಕನಸು ನಾಟಕ’ ರಚಿಸಿದ್ದ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ
ಈ ಹಿಂದೆಯೇ ಕೇಂದ್ರ ಸರ್ಕಾರ e-ಸಿಗರೇಟ್ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಕಳೆದ ಮೂರು ವರ್ಷಗಳ ಹಿಂದೆಯೇ ಬ್ಯಾನ್ ಮಾಡಿ ಆದೇಶ ಹೊರಡಿಸಿದರೂ ಬೆಂಗಳೂರಲ್ಲಿ ಮಾತ್ರ ಇನ್ನೂ e-ಸಿಗರೇಟ್ ಅಕ್ರಮ ಮಾರಾಟ ಜೋರಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸ್ರು ಕೇರಳ ಮೂಲದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
BREAKING NEWS : ‘ಟಿಪ್ಪು ನಿಜ ಕನಸು ನಾಟಕ’ ರಚಿಸಿದ್ದ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ
ಏನಿದು e-ಸಿಗರೇಟ್?
e- ಸಿಗರೇಟ್ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, e-ಸಿಗಾರ್, e- ಪೈಪ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಇವುಗಳನ್ನು e- ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್ಗಳನ್ನು ಉತ್ಪತ್ತಿ ಮಾಡಲಾಗುತ್ತದೆ. ಪ್ರೊಪಿಲೀನ್, ಗ್ಲೈಕಾಲ್, ಗ್ಲಿಸರೀನ್, ಪರಿಮಳಸೂಸುವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.