ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಿಕೊಂಡು ರೀಫಿಲ್ಲಿಂಗ್ ಮಾಡುತ್ತಿದ್ದ ಎರಡು ಸ್ಥಳಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದೆ ಪೊಲೀಸರು ದಾಳಿ ಮಾಡಿ ₹33 ಲಕ್ಷ ಮೌಲ್ಯದ 290 ಗ್ಯಾಸ್ ಸಿಲಿಂಡರ್ಗಳು ಹಾಗೂ ರೀಫಿಲ್ಲಿಂಗ್ ಗೆ ಬಳಸುತ್ತಿದ್ದ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ಎಂಟರ್ ಪ್ರೈಸಸ್ ಅಂಗಡಿ ಮೇಲಿನ ದಾಳಿ ವೇಳೆ 140 ದೊಡ್ಡ ಸಿಲಿಂಡರ್ಗಳು 30 ಸಣ್ಣ ಸಿಲಿಂಡರ್ಗಳು ಸೇರಿದಂತೆ ಒಟ್ಟು 170 ಗ್ಯಾಸ್ ಸಿಲಿಂಡರ್ಗಳು, 5 ರೀಫಿಲ್ಲಿಂಗ್ ರಾಡ್ಗಳು, 200 ಸೀಲ್ ಲೇಬಲ್ಗಳು, 3 ರೆಗ್ಯುಲೇಟರ್ಗಳು ಮತ್ತು 3 ಗೂಡ್ಸ್ ಕ್ಯಾಂಟರ್ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಯ್ಯ ರೆಡ್ಡಿ ಲೇಔಟ್ ಮನೆಯೊಂದರ ಮೇಲಿನ ದಾಳಿ ವೇಳೆ 120 ಗ್ಯಾಸ್ ಸಿಲಿಂಡರ್ಗಳು, 5 ರೀಫಿಲ್ಲಿಂಗ್ ರಾಡ್ಗಳು, 100 ಸೀಲ್ ಲೇಬಲ್ಗಳನ್ನು ಜಪ್ತಿ ಮಾಡಲಾಗಿದೆ.ಈ ಎರಡೂ ಪ್ರಕರಣಗಳಲ್ಲಿ ಪರವಾನಗಿ ಇಲ್ಲದೆ ಜನವಸತಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೆ ಸಿಲಿಂಡರ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು.