ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಮೊದಲ ದಿನದ ಪರೀಕ್ಷೆ ನಡೆಯಿತು. ಇಂದು ಕನ್ನಡ ಹಾಗೂ ಅರೇಬಿಕ್ ಪರೀಕ್ಷೆಗಳು ನಡೆದವು. ಮೊದಲ ದಿನದ ಪರೀಕ್ಷೆಗೆ 25,790 ವಿದ್ಯಾರ್ಥಿಗಳು ಹಾಜರಾದ್ರೇ, 4609 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಪರೀಕ್ಷೆಗಳ ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 29-04-2024ರಂದು ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಿತು. ಕನ್ನಡ ಮತ್ತು ಅರೇಬಿಕ್ ಪರೀಕ್ಷೆಯನ್ನು ನಡೆಸಲಾಯಿತು ಎಂದಿದೆ.
ಬೆಂಗಳೂರು ನಾರ್ಥ್ ನಲ್ಲಿ ನೋಂದಾಯಿಸಿಕೊಂಡ 2183 ವಿದ್ಯಾರ್ಥಿಗಳಲ್ಲಿ 1772 ಮಂದಿ ಹಾಜರಾದ್ರೇ, 411 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಬೆಂಗಳೂರು ಸೌಥ್ ನಲ್ಲಿ 2392 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 249 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ತಿಳಿಸಿದೆ.
ಇಂದಿನ ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಗೆ 30399 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 25790 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಆದ್ರೇ ವಿವಿಧ ಕಾರಣಗಳಿಗಾಗಿ 4609 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.84.84 ರಷ್ಟು ವಿದ್ಯಾರ್ಥಿಗಳ ಹಾಜರಾತಿ ದೃಢೀಕರಣವಾಗಿದೆ ಎಂದು ತಿಳಿಸಿದೆ.
ಪ್ರಧಾನಿ ಮೋದಿ ಮುಂದಿನ ಗುರಿ ‘ಶೂನ್ಯ ವಿದ್ಯುತ್ ಬಿಲ್’, ಪ್ರತಿ ಮನೆಯಲ್ಲೂ ‘ಸೌರ ಫಲಕ’ ಅಳವಡಿಕೆ