ಚಾಮರಾಜನಗರ : ರಾಜ್ಯದಲ್ಲಿ ಇನ್ನು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಮೌಢ್ಯ ಆಚರಣೆಗಳು ಇನ್ನೂ ಜೀವಂತವಾಗಿವೆ. ಅದಕ್ಕೆ ನಿದರ್ಶನ ಎಂಬಂತೆ, ಚಾಮರಾಜನಗರದಲ್ಲಿ ಮಗಳಿಗೆ ಅಂತರ್ಜಾತಿ ಯುವಕನ ಜೊತೆ ಮದುವೆ ಮಾಡಿದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜ ಎಂಬುವವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಸರ್ಕಾರ ಕಾಯ್ದೆ ತಂದರೂ ಕೂಡ ಸಾಮಾಜಿಕ ಬಹಿಷ್ಕಾರ ಪದ್ಧತಿಯ ಉಪಟಳ ಇನ್ನು ನಿಂತಿಲ್ಲ. ಹಾಗಾಗಿ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಕಾಯ್ದೆ ರಕ್ಷಣೆಗೆ ಬರುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಈ ಒಂದು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು ಬಹಿಷ್ಕಾರದಿಂದ ಹೊರ ಬರಬೇಕೆಂದರೆ 5 ಲಕ್ಷ ತಪ್ಪು ಕಾಣಿಕೆ ಕೊಡಬೇಕು.
2023ರಲ್ಲಿ ಕೃಷ್ಣಮೂರ್ತಿ ತಮ್ಮ ಮಗಳಿಗೆ ಮದುವೆ ಮಾಡಿದ್ದರು ಪ್ರೀತಿಸಿದ್ದ ಬೇರೆ ಜಾತಿಯ ಯುವಕರ ಜೊತೆಗೆ ಅವರು ಮದುವೆ ಮಾಡಿದ್ದರು ವಿವಾಹವಾಗಿ ಮೂರು ತಿಂಗಳಿಗೆ ಅಳಿಯ ಮೃತಪಟ್ಟಿದ್ದ. ಅಳಿಯ ಸಾವಿನ ಬಳಿಕ ಮಗಳನ್ನು ಕೃಷ್ಣಮೂರ್ತಿ ದಂಪತಿ ತವರಿಗೆ ಕರಿತಂದಿದ್ದರು. ಅಂತರ್ಜಾತಿ ವಿವಾಹ ಮಾಡಿದಿರಿ ಎಂದು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.








