ನ್ಯೂಯಾರ್ಕ್: ಶನಿವಾರ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಟಿತ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪೊಲೆಂಡ್ನ ಇಗಾ ಸ್ವಯಾಟೆಕ್ (Iga Swiatek) ಗೆದ್ದಿದ್ದಾರೆ.
ತನ್ನ ಪ್ರತಿಸ್ಪರ್ಧಿ ಟುನೀಶಿಯಾದ ಓನ್ಸ್ ಜಬೇರ್ ಅವರನ್ನು 6-2, 7-6(7/5) ನೇರ ಸೆಟ್ಗಳಿಂದ ಮಣಿಸಿದ ಇಗಾ ಸ್ವಯಾಟೆಕ್ ತನ್ನ ಮೊದಲ US ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
21 ವರ್ಷದ ಸ್ವಿಯಾಟೆಕ್ 2020 ಮತ್ತು 2022 ರಲ್ಲಿ ಫ್ರೆಂಚ್ ಓಪನ್ ಗೆದ್ದು, ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಪೋಲಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಗ ಅವರು 3ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಮತ್ತು ಯುಎಸ್ ಓಪನ್ ಗೆದ್ದ ಮೊದಲ ಪೋಲಿಷ್ ಮಹಿಳೆಯಾಗಿದ್ದಾರೆ.
BIG NEWS: ಕಾಬೂಲ್ನಲ್ಲಿ ತರಬೇತಿ ವೇಳೆ ʻಯುಎಸ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ʼ ಪತನ, ಮೂವರು ಸಾವು
BREAKING NEWS : ಪಪುವಾ ನ್ಯೂಗಿನಿಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ | earthquake in Papua New Guinea