ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಹಲ್ಲುಗಳು ಹಳದಿ ಬಣ್ಣವಾಗಿವೆ. ಇನ್ನು ಬಾಯಿ ದುರ್ವಾಸನೆ ಬೀರುತ್ತಿದೆ. ಇದಕ್ಕೆ ಮನೆಯಲ್ಲಿಯೇ ಕೆಲ ಪರಿಹಾರಗಳನ್ನು ಮಾಡಬಹುದು. ಅವುಗಳೆಂದರೆ, ದಿನಕ್ಕೆ ಎರಡು ಬಾರು ಹಲ್ಲು ಉಜ್ಜೋದು ಉತ್ತಮ ಅಭ್ಯಾಸ. ಇದರಿಂದ ಬಾಯಿಯ ಕೊಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಬೆಳಗ್ಗೆ ಎದ್ದ ಮೇಲೆ ಹಾಗು ಮಲಗುವ ಮುನ್ನ ಹಲ್ಲುಜ್ಜಿದರೆ ದಂತವೈದ್ಯರ ಪ್ರಕಾರ ಹಲ್ಲಿನ ಯಾವುದೇ ಸಮಸ್ಯೆಗಳು ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ.
ಹಳೆಯ ಸಂಪ್ರದಾಯ ಪದ್ಧತಿಯಂತೆ ಹಲ್ಲುಜ್ಜಲು ಬೇವಿನ ಕಡ್ಡಿಯನ್ನು ಬಳಸಿ. ಇದೊಂದು ನೈಸರ್ಗಿಕ ಹಾಗು ಅಷ್ಟೆ ಪರಿಣಾಮಕಾರಿ ಮನೆಮದ್ದಾಗಿದೆ. ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಹಾಗು ಕ್ಯಾವೀಟೀಸ್‌ಗಳಿಂದಲೂ ರಕ್ಷಣೆ ನೀಡುತ್ತದೆ.
ಬ್ರೆಷ್ ಆದ ಮೇಲೆ ತೋರು ಬೆರಳನ ಮೂಲಕ ಒಸಡುಗಳನ್ನು ಉಜ್ಜಿಕೊಳ್ಳಿ. ಮಸಾಜ್ ಮಾಡುವರೂಪದಲ್ಲಿ ಒಸಡನ್ನು ಉಜ್ಜಿ. ಹೀಗೆ ಮಾಡಿದರೆ ಒಸಡಿನ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇದರಿಂದ ಒಸಡಿನ ರಕ್ತಸ್ರಾವವನ್ನು ತಡೆಯಬಹುದು. ಹಲ್ಲು ಒಸಡಿನ ಜೊತೆಗೆ ನಾಲಿಗೆಯನ್ನೂ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಬಾಯಿಯಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ.
ಬ್ರೆಷ್‌ನ ಜೊತೆಗೆ ಯಾವುದಾದರೂ ಹರ್ಬಲ್ ಹಲ್ಲಿನ ಪುಡಿಯನ್ನು ಬೆರಳಿನ ಸಹಾಯದಿಂದ ಹಲ್ಲುಜ್ಜಿ. ಆರ್ಯುವೇದ ಅಥವಾ ಹರ್ಬಲ್ ಮೌತ್ ವಾಷ್ ಬಳಸಿ. ಜೇಷ್ಟಮದ್ದು ಅಥವಾ ತ್ರಿಫುಲಾದಗಳನ್ನು ಬಳಸಿ ಹಲ್ಲನ್ನು ಸ್ವಚ್ಛಗೊಳಿಸಬಹುದು.
ಹಲ್ಲು ಉಜ್ಜುವ ಬ್ರೆಷ್‌ನ ಆಯ್ಕೆ ಸರಿಯಾಗಿರಬೇಕು. ಅಗ್ಗದ ಬ್ರೆಷ್‌ಎಂದು ಅದನ್ನೇ ಆಯ್ಕೆ ಮಾಡಿಕೊಳ್ಳದೆ ಉತ್ತಮ ಗುಣಮಟ್ಟದ ಬ್ರೆಷ್‌ನಿಂದ ಹಲ್ಲುಜ್ಜಿ. ಇನ್ನು ಆ ಬ್ರೆಷ್‌ನ ಆಗಾಗ ಬದಲಾಯಿಸುತ್ತಾ ಬನ್ನಿ. ಒಂದೇ ಬ್ರೆಷ್‌ನ ಅನೇಕ ತಿಂಗಳುಗಳ ಕಾಲ ಬಳಸಬೇಡಿ.