ಬೆಂಗಳೂರು: ಚುನಾವಣಾ ಗುರುತಿನ ಚೀಟಿಗೆ ಸಂಬಂಧಪಟ್ಟಂತೆ ನಡೆದಿದೆ ಎನ್ನಲಾಗುತ್ತಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ದೂರು ನೀಡಿದರು. ದೂರು ನೀಡಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ನಮಗೆ ಧಮ್ ತಾಕತ್ತ ಅಂತ ಸಿಎಂ ಹೇಳಿದ್ದರು, ಈಗ ಅವರಿಗೆ ಧಮ್ ತಾಕತ್ತು ಇದ್ದರೇ ನ್ಯಾಯಾಂಗ ತನಿಖೆ ನಡೆಸಲಿ ಅಂತ ಸವಾಲು ಹಾಕಿದರು.
ಇದೇ ವೇಳೆ ಶಾಸಕರು ಹಾಗೂ ಸಚಿವರ ಕಾಲ್ ಲೀಸ್ಟ್ ತೆಗೆದರೆ ಎಲ್ಲವೂ ಬಹಿರಂಗವಾಗಲಿದೆ ಅಂತ ತಿಳಿಸಿದರು. ಇದೇ ವೇಳೇ ನಮ್ಮ ಮನವಿಯನ್ನು ಪುರಸ್ಕರ ಮಾಡದೇ ಹೋದ್ರೆ, ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಇದಲ್ಲದೇ ಮತದಾರರ ಹೆಸರು ಡೀಲಿಟ್ ಆಗಿರುವುದನ್ನು ತಡೆ ಹಿಡಿದು, ಹೊಸದಾಗಿ ಮತದಾರರ ಪಟ್ಟಿಯನ್ನು ರಚನೆ ಮಾಡಬೇಕು ಅಂಥ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹ ಮಾಡಿದರು.