ನವದೆಹಲಿ : ಹಣವಿದ್ದರೆ ಮಾತ್ರ ಈ ಲೋಕದಲ್ಲಿ ಬೆಲೆ ಎಂಬ ಕಟು ಸತ್ಯವನ್ನು ಸಾರುವ ಈ ಮಾತುಗಳು ನಿಜಕ್ಕೂ ಎದೆಗೆ ತಟ್ಟುವಂತಿವೆ. ಹಣ, ಹೆಸರು, ಮತ್ತು ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗ ಸುತ್ತಲೂ ಸಾವಿರಾರು ಜನರ ಕೋಟೆ ಇರುತ್ತದೆ. ಆದರೆ ಒಂದೇ ಒಂದು ಸಣ್ಣ ತಪ್ಪು ಅಥವಾ ಆರ್ಥಿಕ ಹಿನ್ನಡೆ ಉಂಟಾದಾಗ, ನಮ್ಮವರು ಎಂದು ನಂಬಿದವರೇ ದೂರ ಸರಿಯುವ ದುರಂತ ಸಮಾಜದ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ.
ಹೌದು ನಾವು ಈಗ ಹೇಳುತ್ತಿರುವುದು ಅನುರಾಗ್ ದೋಬಲ್ (ಬಾಬು ಭಯ್ಯ) ಎಂಬ ಏಷ್ಯಾದ ನಂಬರ್ 1 ಮೋಟೋ ವ್ಲೋಗರ್ ಬಗ್ಗೆ. ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಮಾಧ್ಯಮ ಮತ್ತು ಬ್ಲಾಗ್‌ಗಳಿಂದ ದೂರ ಉಳಿದಿದ್ದಾರೆ. ತಮಗೆ ಕಳೆದ ಒಂದು ವರ್ಷದಿಂದ ತೀವ್ರ ಮಾನಸಿಕ ಕಿರುಕುಳ, ವೈಯಕ್ತಿಕ ಮತ್ತು ಆರ್ಥಿಕ ನಷ್ಟವಾಗಿದೆ ಎಂದು ಅವರು ಇತ್ತೀಚಿನ ವರದಿಗಳಲ್ಲಿ ತಿಳಿಸಿದ್ದಾರೆ.
ವೈವಾಹಿಕ ಜೀವನದಲ್ಲಿ ಬಿರುಕು: ಇತ್ತೀಚಿನ ವರದಿಗಳ ಪ್ರಕಾರ, ಅವರ ಪತ್ನಿ ರಿತಿಕಾ ಚೌಹಾಣ್ ಅವರಿಂದ ಬೇರೆಯಾಗಿದ್ದಾರೆ. ತಮ್ಮ ಕೊನೆಯ ಸಂದೇಶ ವಿಡಿಯೋದಲ್ಲಿ, ಅವರು ಖಿನ್ನತೆಯಲ್ಲಿದ್ದಾರೆ ಮತ್ತು ಅವರ ಪತ್ನಿ ರಿತಿಕಾ ಅವರನ್ನು ತೊರೆದಿದ್ದಾರೆ ಎಂದು ಆರೋಪಿಸಿದ್ದಾರೆ.ಬಾಬು ಭಯ್ಯ ಅವರ ‘ಲಾಸ್ಟ್ ಮೆಸೇಜ್’ ವಿಡಿಯೋ ವೈರಲ್: ದೋಬಲ್ ಅವರ ಇತ್ತೀಚಿನ ಯೂಟ್ಯೂಬ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.








