ಬೆಂಗಳೂರು: ನಾಯಿ ಮರಿ ಹೇಳಿಕೆಯಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ ಸಮರ ತಾರಕಕ್ಕೇರಿದೆ. ಈ ನಡುವೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ( BJP Government ) ಪಂಚ ಪ್ರಶ್ನೆಗಳಿಗೆ ಉತ್ತರಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಕೇಳಿದ್ದಾರೆ.
ಈ ಬಗ್ಗೆ ಟ್ವಿಟ್ ನಲ್ಲಿ ರಾಜ್ಯ ಸರ್ಕಾರದ ( Karnataka Government ) ಒಳಾಡಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಬರೆದಿರುವಂತ ಪತ್ರವನ್ನು ಅವರು ಶೇರ್ ಮಾಡಿದ್ದಾರೆ. 175 ಪಿಎಸ್ಐ ಕಾರ್ಯಕರ್ತರ ವಿರುದ್ಧದ ಮೊಕದ್ದಮೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ವಾಪಾಸು ಪಡೆದಿದೆ ಎಂದು ಬೊಗಳೆ ಬಿಡೋ ಬಿಜೆಪಿ ನಾಯಕರೇ, ನಿಮಗೆ ಧಮ್ಮು, ತಾಖತ್ತಿದ್ದರೇ 6 ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಅಂತ ಉತ್ತರಿಸಿ ಎಂದು ಕೇಳಿದ್ದಾರೆ.
175 ಪಿಎಫ್ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ ಎಂದು ಬೊಗಳೆ ಬಿಡುತ್ತಿರುವ @BJP4Karnataka ನಾಯಕರೇ,
ನಿಮಗೆ ದಮ್ಮು-ತಾಖತ್ ಇದ್ದರೆ 6 ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲು @CMofKarnataka ಅವರಿಗೆ ಹೇಳಿಬಿಡಿ. pic.twitter.com/ABc9RKWyQd
— Siddaramaiah (@siddaramaiah) January 4, 2023
ಅಂದಹಾಗೆ ರಾಜ್ಯ ಸರ್ಕಾರಕ್ಕೆ ಬರೆದಿರುವಂತ ಪತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಕೋಮು ಸಂಬಂಧಿತ ವಿಷಯವಾಗಿ ದಾಖಲಾದ ಪ್ರಕರಣಗಳು ಎಷ್ಟು? ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಈಚೆಗೆ ಸಿಬಿಐಗೆ ನೀಡಿದ ಪ್ರಕರಣಗಳು ಯಾವುವು.? ಅವುಗಳ ಪ್ರಸ್ತುತ ಸ್ಥಿತಿಗತಿಗಳೇನು ಎಂದು ಕೇಳಿದ್ದಾರೆ.
ಇದಲ್ಲದೇ ನ್ಯಾಯಾಂಗ ತನಿಖೆ, ಇನ್ನಿತರೆ ತನಿಖಾ ಸಂಸ್ಥೆಗಳಿಗೆ ವಹಿಸಿರುವ ಪ್ರಕರಣಗಳು ಎಷ್ಟು? ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ, ಬಜರಂಗದಳ, ಶ್ರೀರಾಮ ಸೇನೆ ಸೇರಿ ಇನ್ನಿತರೆ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣಗಳು ಎಷ್ಟು ಎಂಬುದಾಗಿ ತಿಳಿಸುವಂತೆ ಕೇಳಿದ್ದಾರೆ.
ಪೊಲೀಸರ ಕಾರ್ಯವೈಖರಿ ಬಗ್ಗೆ ನನಗೆ ತೃಪ್ತಿ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ