ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬರಿಗೂ ದೇಹದಲ್ಲಿ ಮೂಳೆಗಳೆ ಮುಖ್ಯ. ಅದು ಇಲ್ಲದಿದ್ದರೆ ಮನುಷ್ಯನಿಗೆ ರೂಪವೇ ಇರುತ್ತಿರಲಿಲ್ಲ. ಆದರೆ ಮೂಳೆ ಚೆನ್ನಾಗಿದ್ರೆ ದೇಹ ಸದೃಡವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದು ಅದರಲ್ಲಿ ಮೂಳೆ ಕ್ಯಾನ್ಸರ್ ಕೂಡಾ ಒಂದಾಗಿದೆ.
ಮೂಳೆಗಳಲ್ಲಿನ ಅಸಹಜ ಕೋಶಗಳು ನಿಯಂತ್ರಣದಿಂದ ಹೊರ ಬಂದಾಗ ಮೂಳೆ ಕ್ಯಾನ್ಸರ್ ಸಂಭವಿಸುತ್ತದೆ. ಆಸ್ಟಿಯೋಸರ್ಕೋಮಾ, ಇವಿಂಗ್ಸ್ಸರ್ಕೋಮಾ ಹಾಗೂ ಕೊಂಡ್ರೊಸರ್ಕೋಮಾ ಎಂದು ಮೂರು ವಿಧಗಳಲ್ಲಿ ಕಂಡುಬರುತ್ತದೆ. ಒಂದು ವೇಳೆ ಇಂತಹ ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷಿಸಬೇಡಿ ಬೇಗ ವೈದ್ಯರ ಹತ್ರ ಹೋಗಿ . ಅದರ ಗುಣ ಲಕ್ಷಣಗಳು ಈ ಕೆಳಗಿನಂತಿವೆ.
ನೋವು ಹಾಗೂ ಊತ
ನಿಮ್ಮ ದೇಹದಲ್ಲಿ ನಿರಂತರ ನೋವು ಹಾಗೂ ಯಾವುದಾದರೂ ಭಾಗದಲ್ಲಿ ಊತ ಕಂಡುಬಂದರೆ ನಿರ್ಲಕ್ಷ್ಯ ವಹಿಸಬೇಡಿ. ಈ ನೋವಿನಿಂದ ನಿದ್ರಾಹೀನತೆಯ ಸಮಸ್ಯೆ ಕೂಡಾ ಉಂಟಾಗುತ್ತದೆ.
ಮರಗಟ್ಟುವುದು
ನಿಶ್ಯಕ್ತಿಯಿಂದ ಕೂಡಾ ಕೆಲವೊಮ್ಮೆ ಕೈ ಹಾಗೂ ಕಾಲು ಮರಗಟ್ಟುತ್ತದೆ. ಆದರೆ ಇದು ಸತತವಾಗಿ ಸಂಭವಿಸಿದಲ್ಲಿ ನೀವು ಡಾಕ್ಟರ್ ಭೇಟಿ ಮಾಡುವುದು ಒಳ್ಳೆಯದು.
ತೂಕ ನಷ್ಟ
ಯಾವುದೇ ಕೆಲಸ ಮಾಡದೆ ಆಗ್ಗಾಗ್ಗೆ ಸುಸ್ತು ಕಾಡುವುದು, ಇತರ ರೀತಿಯ ಅನಾರೋಗ್ಯಕ್ಕೆ ಒಳಗಾಗುವುದು.
ಹಸಿವು ಇಲ್ಲದಿರುವುದು
ನೀವು ಸರಿಯಾಗಿ ಊಟ ಮಾಡದಿದ್ದರೂ ನಿಮಗೆ ಹಸಿವು ಕಾಡದಿದ್ದರೆ ಕೂಡಾ ಅದು ಸಮಸ್ಯೆ ಇರಬಹುದು.
ಜ್ವರ
ಜ್ವರವು ಅನೇಕ ರೋಗಗಳ ಮುಖ್ಯ ಲಕ್ಷಣವಾಗಿದ್ದರೂ ಮೇಲೆ ತಿಳಿಸಿದ ಇತರ ಲಕ್ಷಣಗಳೊಂದಿಗೆ ನಿರಂತರ ಜ್ವರ ಕಾಣಿಸಿಕೊಂಡರೆ ಅದೂ ಕೂಡಾ ಮೂಳೆ ಕ್ಯಾನ್ಸರ್ ಸಂಕೇತವಾಗಿರಬಹುದು.
ಕೀಲು ನೋವುಗಳು
ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟವಾಗುವುದು, ಕೀಲು ನೋವು ಹೆಚ್ಚಾಗಿ ಕಾಡುವುದು ಕಂಡುಬಂದರೆ ಅದೂ ಕೂಡಾ ಬಹಳ ಅಪಾಯ.