ಕೆಎನ್ ಎನ್ ನ್ಯೂಸ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್. ಅದು ಇಲ್ಲದೆ ಒಂದು ದಿನ ಕೂಡ ಇರೋಕೆ ಆಗೊಲ್ಲ. ಹಾಗೆ ಅದನ್ನ ಮೂರು ಹೊತ್ತು ನೋಡ್ತಾ ಇದ್ದರೆ, ಪ್ರಪಂಚದಲ್ಲಿ ಏನು ಆದ್ರೂ ಗೊತ್ತಾಗುವುದಿಲ್ಲ. ಕೆಲವರು ಶೌಚಾಲಯದಲ್ಲೂ ಕೂಡ ಬಳಸುತ್ತಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ;ಶೌನೆ ಮಿಲ್ಲರ್-ಉಯಿಬೊಗೆ ಚಿನ್ನ ಪದಕ
ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಫೋನ್ ಬಳಸುವುದರಿಂದ ಏನು ಆಗುತ್ತೆ ತಿಳಿದುಕೊಳ್ಳಣ
ಮಲಬದ್ದತೆ ಮತ್ತು ಫೈಲ್ಸ್ : ಜೀರ್ಣಾಂಗ ವ್ಯವಸ್ಥೆ ಸರಿಯಾಗದಿದ್ದಾಗ ಮಲಬದ್ಧತೆ ಮತ್ತು ಪೈಲ್ಸ್ನಂತಹ ಸಮಸ್ಯೆಗಳನ್ನು ಎದುರಿಸಬಹುದು. ಹೆಚ್ಚು ಕಾಲ ವಾಶ್ ರೂಂನಲ್ಲಿ ಕುಳಿತುಕೊಳ್ಳುವುದು ನಿಮ್ಮ ವಿಸರ್ಜನಾ ಅಂಗಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡಬಹುದು.ಹೀಗಾಗಿ ಅನಾರೋಗ ಕಾಡುತ್ತದೆ.
ಸೋಂಕಿನ ಅಪಾಯ: ಪ್ರತಿಯೊಂದು ಶೌಚಾಲಯಗಳಲ್ಲೂ ಬ್ಯಾಕ್ಟೀರಿಯಾಗಳ ಇರುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ, ನಿಮ್ಮ ಸ್ಮಾರ್ಟ್ಫೋನ್ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾಗಳಿಂದ ಅಂತಿಮ ಪರಿಣಾಮ ನಿಮ್ಮ ಮೇಲೆ ಆಗುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಮೂತ್ರದ ಸೋಂಕು ಉಂಟಾಗುತ್ತದೆ.
ಅತಿಸಾರ ಸಂಬಂಧಿತ ಸಮಸ್ಯೆಗಳು: ಕೆಲವರು ವಾಶ್ರೂಮ್ನಲ್ಲಿ ನೈರ್ಮಲ್ಯ ಪಾಲಿಸುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಶೌಚಾಲಯದಲ್ಲಿ ಫೋನ್ ಬಳಸಿದ ನಂತರ ಕೈ ತೊಳೆಯುವುದನ್ನು ಕೆಲವರು ಮರೆತುಬಿಡುತ್ತಾರೆ. ಕೈಗೊಳ್ಳನ್ನು ಸ್ವಚ್ಛಗೊಳಿಸದೆ ಆಹಾರ ಸೇವಿಸುತ್ತಾರೆ. ಬ್ಯಾಕ್ಟೀರಿಯಾಗಳು ನಿಮ್ಮ ಹೊಟ್ಟೆಯನ್ನು ತಲುಪಬಹುದು.