ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ಅವರೆ ನಿಮ್ಮ ಮೊಬೈಲ್ ಏನಾದರೂ ಎಸ್ಐಟಿ ಅಧಿಕಾರಿಗಳಿಗೆ ಕೊಟ್ಟರೆ ನೂರಕ್ಕೆ ನೂರರಷ್ಟು ನೀವು ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗುತ್ತೀರಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ಸ್ಫೋಟಕವಾದ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನಿಮ್ಮ ಮೊಬೈಲ್ ಸೀಜ್ ಮಾಡಿದ್ದಾರಲ್ಲ ಆ ಮೊಬೈಲನ್ನು ಎಸ್ಐಟಿಗೆ ಕೊಟ್ಟರೆ ನೂರಕ್ಕೆ ನೂರು ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗುತ್ತಿರಿ. ಪ್ರಜ್ವಲ್ ರೇವಣ್ಣ ಹೇಗೆ ಜೈಲಿಗೆ ಹೋಗಿದ್ದಾರೋ ಅದೇ ರೀತಿ ನೀವು ಜೈಲಿಗೆ ಹೋಗುತ್ತೀರಿ. ನಿಮಗೆ ಯೋಗ್ಯತೆ ಇದೆಯಾ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡೋಕೆ? ಮೈಸೂರಿಗೆ ನಿಮ್ಮ ಕೊಡುಗೆ ಏನು ಹೇಳಿ ಅದನ್ನು ಬಿಟ್ಟು ಬಾಯಿ ಬಡಿಕೊಳ್ಳುವುದು ನಿಲ್ಲಿಸಿ ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸಿದ್ದರಾಮಯ್ಯ ಅವರಿಗೆ ಹೋಲಿಸಿದ ವಿಚಾರವಾಗಿ ಮಾತನಾಡಿದ ಅವರು, ಮಹಾರಾಜರು ಮೈಸೂರಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರು ಕೂಡ ಕುಡಿಯೋ ನೀರು, 12 ಆಸ್ಪತ್ರೆ ಸುಮಾರು 120 ಕಿಲೋಮೀಟರ್ ಕಾಂಕ್ರೀಟ್ ರಸ್ತೆ, ಶಿಕ್ಷಣ ಸಂಸ್ಥೆಗಳು ಕಾಮರ್ಸ್, ಡಿಗ್ರಿ ಕಾಲೇಜ್ ಅನೇಕ ಕೊಡುಗೆ ಕೊಟ್ಟಿದ್ದಾರೆ ನಾಲ್ವಡಿ ಕೃಷ್ಣರಾಜ ಅವರಿಗಿಂತ ಅಭಿವೃದ್ಧಿ ಮಾಡಿದವರು ಸಿಎಂ ಸಿದ್ದರಾಮಯ್ಯ.
ನಾಲ್ವಡಿ ಕೃಷ್ಣರಾಜ ಅವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕಂಪೇರ್ ಮಾಡುತ್ತಿಲ್ಲ ಆದರೆ ಅವರಿಗಿಂತ ಅತೀ ಹೆಚ್ಚು ಅಭಿವೃದ್ಧಿ ಮಾಡಿದವರು ಸಿಎಂ ಸಿದ್ದರಾಮಯ್ಯ ಅವರು ಅಂತ ಹೇಳುತ್ತಿದ್ದೇವೆ. ನಾಲ್ವಡಿ ಕೃಷ್ಣರಾಜ ಅವರ ಕೊಡುಗೆ ಅಪಾರವಾದದ್ದು. 2013 ರಿಂದ 18 ರವರೆಗೆ 5 ವರ್ಷ ಪಿರಿಯಡ್ನಲ್ಲಿ 3800 ಕೋಟಿಗಿಂತಲೂ ಅಧಿಕ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಮಾಡಿದ್ದನ್ನು ಹೇಳಿಕೊಳ್ಳೋದಕ್ಕೆ ನಮಗೆ ಅಂಜಿಕೆ ಇಲ್ಲ ಆದರೆ ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸ ಕಂಡು ಉರಿಯುತ್ತೆ ಟಿಪ್ಪು ಹೆಸರು ಕೇಳಿದರೆ ಸಾಕು ಮಲಗಿದ್ದವರು ಎದ್ದು ಬಿಡ್ತಾರೆ ಎಂದು ವಾಗ್ದಾಳಿ ನಡೆಸಿದರು.