ಕೆಎನ್ಎನ್ಡಿಜಿಟಲ್ ಡೆಸ್ಕ್ : ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ತಿಳಿಯದಿದ್ದಾಗ ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಭಾವನಾತ್ಮಕ ಸಂದೇಶ ಬರೆಯುವುದು, ಪುಟಗಳ ಮಧ್ಯದಲ್ಲಿ ಹಣ ಇಡುವುದು, ಹಾಡು ಬರೆಯೋದನ್ನ ಕೇಳಿರ್ತೀರಿ. ಆದ್ರೆ, ಇಲ್ಲೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆ ನೋಡಿದ ಶಿಕ್ಷಕರೇ ಶಾಕ್ ಆಗಿದ್ದಾರೆ. ಯಾಕಂದ್ರೆ, ಆ ವಿದ್ಯಾರ್ಥಿ ನೇರವಾಗಿ ಶಿಕ್ಷಕರ ಕುಟಂಬವನ್ನೇ ಎಳೆದು ತಂದಿದ್ದಾನೆ.
ಹೌದು, ಪರೀಕ್ಷೆಯಲ್ಲಿ ಫೇಲ್ ಆಗಬಹುದೆಂಬ ಭಯದಿಂದ ವಿದ್ಯಾರ್ಥಿ, ಶಿಕ್ಷಕನ ಕುಟುಂಬ ಸದಸ್ಯರನ್ನ ಎಳೆದು ತಂದಿದ್ದು, ನನಗೆ ಪಾಸ್ ಮಾರ್ಕ್ ನೀಡದಿದ್ರೆ, ನಿಮ್ಮ ಕುಟುಂಬದ ಮೇಲಾಣೆ, ನಿಮ್ಮ ಮಗನ ಮೇಲಾಣೆ ಎಂದು ಬರೆದಿದ್ದಾನೆ. ಸಧ್ಯ ವಿದ್ಯಾರ್ಥಿಯ ಈ ಮನವಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವಿದ್ಯಾರ್ಥಿಯು ಪ್ರತಿಯ ಕೊನೆಯಲ್ಲಿ ಈ ರೀತಿ ಬರೆದಿದ್ದಾನೆ.!
ಪೇಪರ್ನಲ್ಲಿ ಉತ್ತರ ಬರೆದ ವಿದ್ಯಾರ್ಥಿ ಅಂತಿಮವಾಗಿ ಧನ್ಯವಾದಗಳು ಎಂದು ಬರೆದ್ದಾನೆ. ಇದರ ನಂತ್ರ ಎರಡು ಎಮೋಜಿಗಳನ್ನ ಬಿಡಿಸಿದ್ದು, ಒಂದು ಸ್ಮೈಲಿ ಮತ್ತು ಇನ್ನೊಂದು ಹೃದಯವಿದೆ. ಇನ್ನು ಮುಂದುವರೆದ ವಿದ್ಯಾರ್ಥಿ, “ದಯವಿಟ್ಟು ನನಗೆ 28 ಸಂಖ್ಯೆಗಳನ್ನ ಮಾತ್ರ ನೀಡಿ. ನಿಮ್ಮ ಕುಟುಂಬದ ಮೇಲಾಣೆ, ನಿಮ್ಮ ಮಗನ ಮೇಲಾಣೆ” ಎಂದು ಬರೆದಿದ್ದಾನೆ.
ಅಂದ್ಹಾಗೆ, ಹೀಗೆ ಬರೆದ್ರೆ, ಶಿಕ್ಷಕರು ತನಗೆ ಸಹಾಯ ಮಾಡ್ತಾರೆ ಅಂತಾ ವಿದ್ಯಾರ್ಥಿ ಭಾವಿಸಿರ್ಬೋದು. ಆದ್ರೆ, ಇದೀಗ ಈ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗ್ತಿದೆ.