ಮುಂಬೈ: ಶ್ರದ್ದಾ ವಾಕರ್ ಅವರ ಲಿವ್-ಇನ್ ಪಾರ್ಟ್ನರ್ ಅಫ್ತಾಬ್ ಅಮೀನ್ ಪೂನಾವಾಲಾ ಭೀಕರ ಹತ್ಯೆ ಇನ್ನೂ ನಮ್ಮ ಮುಂದೆ. ಈ ನಡುವೆ ಮುಂಬೈ ಒಬ್ಬ ವ್ಯಕ್ತಿಯು ಮಹಾರಾಷ್ಟ್ರದ ಧುಲೆಯಲ್ಲಿ ತನ್ನ ಲಿವ್-ಇನ್ ಪಾರ್ನರ್ ಗೆ ಬೆದರಿಕೆ ಹಾಕಲು ಶ್ರದ್ದಾ ವಾಕರ್ ಕೊಲೆಯನ್ನು ನೆಪವಾಗಿ ಬಳಸಿಕೊಂಡಿರುವ ಘಟನೆ ನಡೆದಿದೆ.
ಅವನು ಅವಳನ್ನು 35 ತುಂಡುಗಳಾಗಿ ಕತ್ತರಿಸಿದರೆ, ನಾನು ನಿನ್ನನ್ನು 70 ಕ್ಕೆ ಕತ್ತರಿಸುತ್ತೇನೆ” ಎಂದು ಅರ್ಷದ್ ಸಲೀಂ ಮಲಿಕ್ ತನ್ನ ಲಿವ್-ಇನ್ ಸಂಗಾತಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನವೆಂಬರ್ 29 ರಂದು ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಖಾಸಗಿ ಮಾಧ್ಯಮವೊಂದರ ಪ್ರಕಾರ, ತನ್ನ ಲಿವ್-ಇನ್ ಪಾರ್ಟ್ನರ್ – ಅರ್ಷದ್ ಸಲೀಂ ಮಲಿಕ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಲಿವ್-ಇನ್ ಸಂಬಂಧದಲ್ಲಿರಲು ಒತ್ತಾಯಿಸಲು ಅತ್ಯಾಚಾರದ ವೀಡಿಯೊ ತುಣುಕಿನಿಂದ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಅರ್ಷದ್ ಸಲೀಮ್ ಮಲಿಕ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ತನ್ನ ಹೆಸರು ಹರ್ಷಲ್ ಮಾಲಿ ಎಂದು ಆತ ಹೇಳಿಕೊಂಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಇಬ್ಬರೂ ಕೂಡ ಜುಲೈ 2021 ರಿಂದ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದ್ದು, ಅಂದ ಹಾಗೇ ದೂರು ನೀಡಿರುವ ಮಹಿಳೆ ಮೊದಲು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದರು ಆದರೆ ಆತ 2019 ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಎನ್ನಲಾಗಿದ್ದು, ಇದೇ ವೇಳೆ ಆಕೆಗೆ ಮೊದಲ ಗಂಡನಿಂದ ಮಗುವನ್ನು ಕೂಡ ಪಡೆದುಕೊಂಡಿದ್ದ ಎನ್ನಲಾಗಿದೆ.
ಇಸ್ಲಾಂಗೆ ಮತಾಂತರಗೊಳ್ಳುವ ಮಲಿಕ್ ಮಾತನ್ನು ಮಹಿಳೆ ವಿರೋಧಿಸಿದಾಗ, ಶ್ರದ್ಧಾ ವಾಕರ್ ಅವರ ಪ್ರಕರಣದ ನೆಪವೊಡ್ಡಿ ಮಲಿಕ್ ಮಹಿಳೆಯನ್ನು ಬೆದರಿಸಿದ ಎನ್ನಲಾಗಿದ್ದು “ಶ್ರದ್ಧಾ ಅವರನ್ನು 35 ತುಂಡುಗಳಾಗಿ ಕತ್ತರಿಸಲಾಗಿದೆ ಆದರೆ ನಾನು ನಿಮ್ಮನ್ನು 70 ತುಂಡುಗಳಾಗಿ ಕತ್ತರಿಸುತ್ತೇನೆ ಅಂಥ ಹೇಳಿದ್ದನಂತೆ.