ಬೆಂಗಳೂರು : ಸಾರ್ವಜನಿಕ ಜೀವನಕ್ಕೆ ಬಂದರೆ ಸಾರ್ವಜನಿಕರ ಜೊತೆಗೆ ಇರಬೇಕು. ರಾಜ ಅನ್ನೋದು ಎಸಿ ರೂಮ್ ಎಲ್ಲ ಬಿಡಬೇಕಾಗುತ್ತದೆ ಎಂದು ಪ್ರತಾಪ ಸಿಂಹಗೆ ಯದುವೀರ್ ಒಡೆಯರ್ ಟಾಂಗ್ ನೀಡಿದ್ದಾರೆ.
BREAKING: ಶರದ್ ಪವಾರ್ ಹೆಸರು ಬಳಸದಂತೆ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಸೂಚನೆ!
ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ 1 ವರ್ಷದಿಂದ ರಾಜಕೀಯಕ್ಕೆ ಬರುವ ಕುರಿತು ಯೋಜನೆ ಮಾಡಿದ್ದೆ.ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಮಾಡುತ್ತೇನೆ. ಪ್ರತಾಪ್ ಸಿಂಹ ಅವರ ಜೊತೆಗೆ ಯಾವಾಗಲೂ ಸಂಪರ್ಕದಲ್ಲಿದ್ದೇನೆ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದರು.
ನಂತರ ಅವರು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದರು. ಇವಳೇ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತನಾಡಿ, ರಾಜ ಮನೆತನದ ಯದುವೀರ್ ಒಡೆಯರ್ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕಿದ್ದು ತೀರ್ಮಾನ ಆಗಿದೆ ಬಹುಶಃ ಅವರಿಂದ 6 ಅಥವಾ 7 ಲೋಕಸಭಾ ಕ್ಷೇತ್ರ ಗೆಲ್ಲಲು ಅನುಕೂಲವಾಗುತ್ತದೆ.
ಅವಿವಾಹಿತ ಅತಿಥಿಗಳು ರಾತ್ರಿಯಲ್ಲಿ ಬಾಡಿಗೆದಾರರ ಮನೆಯಲ್ಲಿ ಉಳಿಯುವು ನಿಷೇಧ: ನೋಯ್ಡಾದ ಹೈ-ರೈಸ್ ಅಸೋಸಿಯೇಷನ್
ಯದುವೀರ್ ಅವರು ಸ್ಪರ್ಧೆ ಮಾಡಿರುವುದರಿಂದ ಒಂದು ದೊಡ್ಡ ಶಕ್ತಿ ನಮಗೆ ಬಂದಂತಾಗಿದೆ.ಅವರು ಸಹ ಸುತ್ತಮುತ್ತ ಇರುವ ಜಿಲ್ಲೆಗಳಲ್ಲಿ ಓಡಾಡುತ್ತಾರೆಂದು ಒಪ್ಪಿಕೊಂಡಿದ್ದಾರೆ. 25, 26 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ.ಈ ಹಿನ್ನೆಲೆಯಲ್ಲಿ ಬಂದಿರುವುದು ಶಕ್ತಿ ಬಂದಿದೆ, ಪಕ್ಷದ ಪರವಾಗಿ ರಾಜ್ಯದ ಜನತೆಯ ಪರವಾಗಿ ಅವರನ್ನು ಸ್ವಾಗತ ಮಾಡುತ್ತೇನೆ ಎಂದರು
ಇದೆ ವೇಳೆ ಇದು ಯದುವೀರ್ ಒಡೆಯರ್ ಅವರು ಮಾತನಾಡಿ, ಮುಂಬರುವ ಕೊಡಗು ಮೈಸೂರು ಕ್ಷೇತ್ರದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅಮಿತ್ ಶಾ ಅವರುಗೆ ಧನ್ಯವಾದಗಳು.ಮೈಸೂರು ಅರಮನೆ ಜವಾಬ್ದಾರಿ ಬಂದ ನಂತರ ಜನರ ಜೊತೆಗೆ ಹಾಗೂ ಸಾರ್ವಜನಿಕ ಜೀವನದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ.
ನನ್ನ ವಿರುದ್ಧ ‘ಷಡ್ಯಂತ್ರ’ ಮಾಡಿವರಿಗೆ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ : ಶ್ರೀ ರಾಮುಲು
ಹೀಗಾಗಿ ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದು ನನಗೆ ಜನರ ಸೇವೆ ಮಾಡಲು ಇದೀಗ ಅವಕಾಶ ಸಿಕ್ಕಿದೆ.ಅದಕ್ಕೆ ತಕ್ಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಸುಮಾರು 1 ವರ್ಷದಿಂದ ನಾನು ರಾಜಕೀಯಕ್ಕೆ ಬರಲು ಅಂದುಕೊಂಡಿದ್ದೆ.ವೈಯಕ್ತಿಕ ಜೀವನದಲ್ಲೂ ಕೂಡ ನಾವು ಸಾರ್ವಜನಿಕರಿಗೆ ಹತ್ತಿರವಾಗಿ ಸಮಸ್ಯೆ ಬಗೆಹರಿಸಿದ್ದೇನೆ. ಬಿಜೆಪಿ ದೇಶಕ್ಕೆ ನೀಡಿರುವ ಅಭಿವೃದ್ಧಿ ಕೆಲಸ ನೋಡಿ ನನಗೆ ರಾಜಕೀಯಕ್ಕೆ ಬರಬೇಕೆಂದು ಎನಿಸಿದೆ.
ಅರಮನೆಯಲ್ಲಿ ಇದ್ದರೆ ಇಂತಹ ಪ್ರಶ್ನೆಗಳು ಬರಲ್ಲ ಅಂತ ಇಲ್ಲ ರಾಜಕೀಯ ಜೀವನ ಆಗಿರ್ಬಹುದು ವೈಯಕ್ತಿಕ ಜೀವನವಾಗಿರುವುದು ಇಂತಹ ಎಲ್ಲಾ ಹೇಳಿಗಳನ್ನು ನುಂಗಬೇಕು. ಆದರೆ ರಾಜಕೀಯ ಕ್ಷೇತ್ರದಲ್ಲಿ ಇಂಥ ಹೇಳಿಕೆಗಳು ಜಾಸ್ತಿ ಬರುತ್ತವೆ ಅದನ್ನು ಅರಗಿಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.