ಬೆಂಗಳೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನುದಾನ ವಿಷಯದಲ್ಲಿ ತಾರತಮ್ಯಾಗ ಮಲತಾಯಿ ಧೋರಣೆ ಕುರಿತಂತೆ ವಿರೋಧಿಸಿ ಫೆಬ್ರವರಿ ಯೋಳರಂದು ನಾಡಿದ್ದು ದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ರಾಜ್ಯ ಬಿಜೆಪಿಯು ವಾಗ್ದಾಳಿ ನಡೆಸಿದ್ದು, ನಿಮ್ಮಿಂದ ಆಡಳಿತ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೊರಡಿ ಎಂದು ಟೀಕಿಸಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಸಿದ್ದರಾಮಯ್ಯ ಅವರ “ಸ್ಲೀಪಿಂಗ್ ಸರ್ಕಾರ” ಕಳೆದ 9 ತಿಂಗಳಿಂದಲೂ ನಿದ್ದೆ ಮಾಡುತ್ತಲೇ ಇದೆ. ಎಚ್ಚರಿಸುವ ಕೆಲಸ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸಾಗುತ್ತದೆ.ನಿಮ್ಮಿಂದ ಆಡಳಿತ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೊರಡಿ. ನಿಮ್ಮ ದುರಾಡಳಿತದಿಂದಾಗಿ ಕರ್ನಾಟಕದ ಜನ ರೋಸಿ ಹೋಗಿದ್ದಾರೆ.
ಸ್ವಾಮಿ ಸಿದ್ದರಾಮಯ್ಯರವರೇ, ನಿಮ್ಮ ಸಾಧನೆ ಏನು ಹೇಳಿ ಎಂದು ಜನತೆ ಕೇಳಿದರೆ, ನಿಮ್ಮ ಬಳಿ ಉತ್ತರವಿಲ್ಲ. ಬೇರೆಯವರ ಮೇಲೆ ಗೂಬೆ ಕೂರಿಸಲು ನೀವು ಕೊಡುವ ಸಮಯವನ್ನೇನಾದರೂ ರಾಜ್ಯದ ಅಭಿವೃದ್ಧಿಗೆ ಕೊಟ್ಟಿದ್ದರೆ, ಬಹುಶಃ ಇಂದು ನೀವು ಈ ರೀತಿ ಬೊಗಳೆ ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ಸಿದ್ದರಾಮಯ್ಯ ಅವರ "ಸ್ಲೀಪಿಂಗ್ ಸರ್ಕಾರ" ಕಳೆದ 9 ತಿಂಗಳಿಂದಲೂ ನಿದ್ದೆ ಮಾಡುತ್ತಲೇ ಇದೆ. ಎಚ್ಚರಿಸುವ ಕೆಲಸ ಮಾಡಿದರೆ @siddaramaiah ಅವರಿಗೆ ಇರಿಸು ಮುರಿಸಾಗುತ್ತದೆ.
ಸ್ವಾಮಿ ಸಿದ್ದರಾಮಯ್ಯರವರೇ, ನಿಮ್ಮ ಸಾಧನೆ ಏನು ಹೇಳಿ ಎಂದು ಜನತೆ ಕೇಳಿದರೆ, ನಿಮ್ಮ ಬಳಿ ಉತ್ತರವಿಲ್ಲ.
ಬೇರೆಯವರ ಮೇಲೆ ಗೂಬೆ ಕೂರಿಸಲು ನೀವು ಕೊಡುವ ಸಮಯವನ್ನೇನಾದರೂ… https://t.co/7NQ36eAAtp
— BJP Karnataka (@BJP4Karnataka) February 5, 2024