ತುಮಕೂರು : ರಾಜ್ಯದ ಇತಿಹಾಸದಲ್ಲಿ ಡಿ. ದೇವರಾಜು ಅರಸು ಅವರ ಬಳಿಕ ದೀರ್ಘಾವಧಿ ಮುಖ್ಯಮಂತ್ರಿ ಆಗಿ ಸಿಎಂ ಸಿದ್ದರಾಮಯ್ಯ ಇಂದು ದೇವರಾಜ್ ಅರಸು ಅವರ ದಾಖಲೆ ಸರಿಗಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಗಂಭೀರವಾದ ಆರೋಪ ಮಾಡಿದ್ದು ಅಭಿವೃದ್ಧಿಗೆ ಹಣ ಕೇಳಿದರೆ ಕಾಂಗ್ರೆಸ್ ಪಕ್ಷಕ್ಕೆ ಬಾ ಅಂತ ಸಿಎಂ ಸಿದ್ದರಾಮಯ್ಯ ಅವಾನಿಸಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಗೆ ಹಣ ಕೇಳಿದರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕರೆಯುತ್ತಾರೆ. ಕಾಂಗ್ರೆಸ್ ಗೆ ಬಂದರೆ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುತ್ತೇನೆ ಅಂತಾರೆ ತುಮಕೂರಿನಲ್ಲಿ ತುರುವೇಕೆರೆ ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ ಬೆಳಗಾವಿ ಅಧಿವೇಶನದಲ್ಲಿ ಚೇಂಬರ್ ಗೆ ಕರೆದು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು. ತುರುವೇಕೆರೆಗೆ ಒಂದು ಲಾ ಕಾಲೇಜು ಹಾಗು ಪಾಲಿಟೆಕ್ನಿಕ್ ಕಾಲೇಜು ಕೇಳಿದ್ದೆ ಆ ಕಾಲೇಜು ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವಂತ ಹೇಳುತ್ತಾರೆ ಇಂತಹ ಸಿದ್ದರಾಮಯ್ಯ ಈಗ ಅರಸು ದಾಖಲೆ ಸರಿಗಟ್ಟಿದ್ದಾರೆ ಅಂತಾರೆ.
ಆದರೆ ಸಿಎಂ ಸ್ಥಾನದಲ್ಲಿ ಎಷ್ಟು ದಿನ ಇದೆ ಅನ್ನೋದು ಮುಖ್ಯವಲ್ಲ ಏನು ಮಾಡಿದೆ ಅನ್ನೋದು ಮುಖ್ಯ. ಇನ್ನಾದರೂ ಅಭಿವೃದ್ಧಿ ಕೆಲಸ ಮಾಡಲಿ ಕುರ್ಚಿ ಕಿತ್ತಾಟ ಬಿಟ್ಟು ಜನಪರ ಕೆಲಸ ಮಾಡಲಿ. ಭ್ರಷ್ಟಾಚಾರ ತುಂಬಿತುಳುಕುತಿದೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಕಡಿವಾಣ ಹಾಕಲಿ. ಜನರಿಗೆ ಗ್ಯಾರಂಟಿ ಕೊಟ್ಟು ಏನು ಮಾಡಿದಿರಿ? ಅಭಿವೃದ್ಧಿ ಹಳ್ಳ ಹಿಡಿದಿದೆ. ಜಾತಿ ಸಂಘರ್ಷ ತಂದು ಹಾಕಿ ರಾಜ್ಯ ಹಾಳು ಮಾಡಿದಿರಿ ಎಂದು ವಾಗ್ದಾಳಿ ನಡೆಸಿದರು.








