ಬೆಂಗಳೂರು : ಧಾರವಾಡ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಫಕೀರ ದಿಂಗಾಲೇಶ್ವರ ಶ್ರೀಗಳು ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಪ್ರತಿಕ್ರಿಯೆ ನೀಡಿದ್ದು, ಶ್ರೀಗಳ ಸ್ಪರ್ಧೆ ಕುರಿತಂತೆ ಮೊದಲೇ ನಮಗೆ ಮಾಹಿತಿ ಇದ್ದರೆ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಆ ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಿದ್ದೆವು ಎಂದು ತಿಳಿಸಿದರು.
BREAKING: ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ | Karnataka 2nd PUC Exam 2024
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಸ್ಪರ್ಧಿಸುತ್ತಾರೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಮೊದಲೆ ಗೋತ್ತಿದ್ದರೆ ನಾವೇ ಅವರಿಗೆ ಟಿಕೆಟ್ ಕೊಡುತ್ತಿದ್ದೆವು ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದಾರೆ ಧಾರವಾಡದಲ್ಲಿ ಹಿಟ್ಲರ್ ಆಡಳಿತ ಆಗಿಬಿಟ್ಟಿದೆ. ಸ್ವಾಮೀಜಿಗಳು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ. ಸ್ವಾಮೀಜಿಗಳ ನಿರ್ಧಾರ ಒಳ್ಳೆಯ ನಿರ್ಧಾರ ಎಂದು ಸಚಿವ ವಿನಯ್ ಕುಲಕರ್ಣಿ ತಿಳಿಸಿದರು.
BREAKING : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ: ಸ್ಕ್ರಾಪ್ ಗೋದಾಮಿಗೆ ಬೆಂಕಿ, 2 ಟ್ರಾಕ್ಟರ್, ಬೈಕ್ ಬೆಂಕಿಗಾಹುತಿ
ನಮ್ಮ ಜಿಲ್ಲೆಯಲ್ಲಿ ಹಿಟ್ಲರ್ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾಮೀಜಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.ಸಮಾಜದಲ್ಲಿ ಬದಲಾವಣೆ ತರಲು ಇಂಥ ಸ್ವಾಮೀಜಿಗಳು ಬೇಕೇ ಬೇಕು. ಈ ರೀತಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಗೊತ್ತಿದ್ದರೆ ಅವರಿಗೆ ಟಿಕೆಟ್ ನೀಡುತ್ತಿದ್ದೆವು ಎಂದು ಅವರು ತಿಳಿಸಿದರು.
Stock Market : 25,000 ಮಟ್ಟದಿಂದ 75,000 ತಲುಪಲು 10 ವರ್ಷಗಳು ಬೇಕಾಯ್ತು, ಮುಂದಿನ ಸ್ಥಿತಿ ಹೇಗಿರುತ್ತೆ.?
ಲಿಂಗಾಯತ ಸಮಾಜಕ್ಕೆ ಅನ್ಯವಾಗುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ಪಕ್ಷದಲ್ಲೇ ಇರುವಂತಹ ನಮ್ಮ ಸಮಾಜದ ಹಲವು ನಾಯಕರಿಗೆ ಮುಖಂಡರಿಗೆ ಬಹಳ ಅನ್ಯಾಯವಾಗಿದೆ. ಆದರೆ ಅವರಿಗೆ ಬಾಯಿ ಬಿಟ್ಟು ಮಾತನಾಡುವ ಅವಕಾಶ ಇಲ್ಲ. ಇದರಿಂದ ಬಹಳಷ್ಟು ಜನರು ಬಿಜೆಪಿ ಪಕ್ಷದಲ್ಲಿ ನೊಂದಿದ್ದಾರೆ. ಹಾಗಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ವಿನಯ್ ಕುಲಕರ್ಣಿ ಅವರು ತಿಳಿಸಿದರು.