ಚಿತ್ರದುರ್ಗ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೇಶದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಲೇವಡಿ ಮಾಡಿದ್ದರು. ಇದೀಗ ಅವರ ಹೇಳಿಕೆಗೆ ಮಧು ಬಂಗಾರಪ್ಪ ತಿರುಗೇಟು ನೀಡಿದ್ದು, ನನ್ನ ಹೇರ್ ಕಟ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರನೇ ಬಂದು ಮಾಡಲಿ ಎಂದರು.
ಶಿಕ್ಷಣ ಸಚಿವ ಇನ್ನೂ ಸಿನಿಮಾ ಭ್ರಮೆಯಲ್ಲಿದ್ದಾರೆ, ಮೊದಲು ಹೇರ್ ಕಟಿಂಗ್ ಮಾಡಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೇಶದ ಕುರಿತು ಹೇಳಿಕೆ ನೀಡಿದರು ಇದೀಗ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮದ್ದು ಬಂಗಾರಪ್ಪ ಬಿ ವೈ ವಿಜಯೇಂದ್ರ ಅವರು ಫ್ರೀ ಇದ್ದರೆ ಬಂದು ನನ್ನ ಕಟಿಂಗ್ ಮಾಡಲಿ. ಸದ್ಯಕ್ಕೆ ನಾನು ಫ್ರೀ ಇಲ್ಲ ಎಂದು ತಿರುಗೇಟು ನೀಡಿದರು.
ಶಾಲಾಮಕ್ಕಳ ಭವಿಷ್ಯ ಮತ್ತು ಅವರ ಹಿತಾಸಕ್ತಿಯ ದೃಷ್ಟಿಯಿಂದ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಮಧು ಬಂಗಾರಪ್ಪ, ಬಿಜೆಪಿ ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ಮಾಡುವುದು ಸಹ ಸಾಧ್ಯವಾಗಿರಲಿಲ್ಲ, ಅದನ್ನು ತಮ್ಮ ಸರ್ಕಾರ ಮಾಡಬೇಕಾಯಿತು ಎಂದರು.ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳನ್ನು ಹೊಲಸೆಬ್ಬಿಸಿದ್ದ ಕಾರಣ ಅವುಗಳ ಪಾವಿತ್ರ್ಯತೆ ಹಾಳಾಗಿತ್ತು, ಎಲ್ಲವನ್ನು ಸ್ವಚ್ಛಗೊಳಿಸುವ ಕೆಲಸ ತಮ್ಮ ಇಲಾಖೆ ಮಾಡುತ್ತಿದೆ ಎಂದು ಸಚಿವ ಹೇಳಿದರು.
ವಿಜಯೇಂದ್ರ ಅವರ ಹಣೆಬರಹ ಜೂನ್ 4ಕ್ಕೆ ಬರುತ್ತದೆ ಆಗ ನೋಡಿಕೊಳ್ಳಲಿ. ನನ್ನ ಹಣಬರಹ ನಾನು ನೋಡಿಕೊಳ್ಳುತ್ತೇನೆ, ತೊಂದರೆಯಿಲ್ಲ. ಇಷ್ಟು ವರ್ಷ ಬಿಜೆಪಿ ಹೊಲಸು ಮಾಡಿದ್ದನ್ನು ನಾವು ಸರಿ ಮಾಡುತ್ತಿದ್ದೇವೆ. ಪಠ್ಯ ಪರಿಷ್ಕರಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡಿದ್ದೇವೆ. ಬಿಜೆಪಿ ಹಣೆಬರಹಕ್ಕೆ ಶಿಕ್ಷಕರ ನೇಮಕಾತಿಯನ್ನೂ ಮಾಡಲಾಗಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.