ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಇತ್ತೀಚೆಗೆ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಮತ್ತು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಗರ ಉಪ ವಿಭಾಗದ ಪೊಲೀಸರು ‘ಐಟಿಎಂಎಸ್’ (Intelligent Traffic Management System) ತಂತ್ರಜ್ಞಾನವನ್ನು ಜಾರಿಗೆ ತಂದಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಾಗರದ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾಹಿತಿ ನೀಡಿದು, ಸಂಚಾರ ನಿಯಮಗಳನ್ನು ಪಾಲಿಸದ ವಾಹನ ಸವಾರರ ವಿರುದ್ಧ ಕ್ರಮಕ್ಕಾಗಿ ಸರ್ಕಾರದ ಉಪಕ್ರಮವನ್ನು, ಸಾಗರ ವ್ಯಾಪ್ತಿಯಲ್ಲೂ ಜಾರಿಗೊಳಿಸಲಾಗುತ್ತಿದೆ. ಆ ಮೂಲಕ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸೋ ಕ್ರಮ ವಹಿಸಲಾಗುತ್ತಿದ ಎಂದು ತಿಳಿಸಿದರು..
ಎಎಸ್ಪಿ ಡಾ.ಬೆನಕ ಪ್ರಸಾದ್ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್ ಹೀಗಿದೆ..
-
ಏನಿದು ಐಟಿಎಂಎಸ್?: ಇದು ಸ್ಮಾರ್ಟ್ ಸಿಟಿ ಯೋಜನೆಯಡಿ ಜಾರಿಗೆ ಬಂದಿರುವ ತಂತ್ರಜ್ಞಾನವಾಗಿದೆ. ಇನ್ಮುಂದೆ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡುವ ಬದಲಿಗೆ, ನಿಯಮ ಉಲ್ಲಂಘಿಸುವವರ ಫೋಟೋ ತೆಗೆದು ಪೋರ್ಟಲ್ಗೆ ಅಪ್ಲೋಡ್ ಮಾಡುತ್ತಾರೆ.
-
ಫೋಟೋ ಆಧಾರಿತ ದಂಡ: ಪೊಲೀಸರು ತಮ್ಮ ಮೊಬೈಲ್ನಲ್ಲಿ ಜಿಪಿಎಸ್ ಲೋಕೇಶನ್ ಮತ್ತು ಸಮಯದ ಮಾಹಿತಿಯಿರುವ ಫೋಟೋವನ್ನು ಸೆರೆಹಿಡಿಯುತ್ತಾರೆ. ಹೆಲ್ಮೆಟ್ ಇಲ್ಲದವರು, ತ್ರಿಬಲ್ ರೈಡಿಂಗ್ ಮಾಡುವವರು ಮತ್ತು ಸೀಟ್ ಬೆಲ್ಟ್ ಧರಿಸದವರ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದು ಐಟಿಎಂಎಸ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
-
ಅರ್ಧ ಗಂಟೆಯೊಳಗೆ ದಂಡದ ಮೆಸೇಜ್: ಫೋಟೋ ಅಪ್ಲೋಡ್ ಆದ ಕೇವಲ ಅರ್ಧದಿಂದ ಒಂದು ಗಂಟೆಯೊಳಗೆ ವಾಹನದ ಮಾಲೀಕರಿಗೆ ದಂಡದ ಚಲನ್ ಲಿಂಕ್ ಮೆಸೇಜ್ ಮೂಲಕ ಹೋಗುತ್ತದೆ. ಸಾರ್ವಜನಿಕರು ಆ ಲಿಂಕ್ ಓಪನ್ ಮಾಡಿ ತಾವೆಲ್ಲಿ ನಿಯಮ ಉಲ್ಲಂಘಿಸಿದ್ದೇವೆ ಎಂಬ ಫೋಟೋ ಸಾಕ್ಷಿಯನ್ನು ಕೂಡ ನೋಡಬಹುದು.
-
ಅಪ್ರಾಪ್ತರ ಚಾಲನೆಗೆ ಕಠಿಣ ಶಿಕ್ಷೆ: ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವ ಪೋಷಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಮೈನರ್ ಮಕ್ಕಳಿಗೆ ವಾಹನ ನೀಡಿದ್ದಕ್ಕೆ ತಂದೆಯನ್ನು ಜೈಲಿಗೆ ಕಳುಹಿಸಿದ ಉದಾಹರಣೆಗಳಿವೆ ಎಂಬುದಾಗಿ ನೆನಪಿಸಿದರು..
-
ಸಾರ್ವಜನಿಕರಿಗೆ ಮನವಿ: “ದಂಡ ವಸೂಲಿ ಮಾಡುವುದು ನಮ್ಮ ಉದ್ದೇಶವಲ್ಲ, ನಿಮ್ಮ ಜೀವಗಳನ್ನು ರಕ್ಷಿಸುವುದು ನಮ್ಮ ಗುರಿ. ದಯವಿಟ್ಟು ಹೆಲ್ಮೆಟ್ ಧರಿಸಿ ಮತ್ತು ಸಂಚಾರ ನಿಯಮ ಪಾಲಿಸಿ” ಎಂದು ಸಾಗರ ಎಎಸ್ಪಿ ಡಾ.ಬೆನಕ ಪ್ರಸಾದ್ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಸದ್ಯ ಸಾಗರದಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ. ಅದಕ್ಕೆ ಅವಕಾಶ ಮಾಡಿಕೊಡದಂತೆ ಸಾಗರದ ಸಮಸ್ತ ವಾಹನ ಸವಾರರು ಕಟ್ಟು ನಿಟ್ಟಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅವರು ಕೋರಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಮಾ.22ರಿಂದ ಸಾಗರ ಮಹಾಗಣಪತಿ ಜಾತ್ರಾ ಮಹೋತ್ಸವ, ಅದ್ದೂರಿ ರಥೋತ್ಸವ- ಇಓ ಪ್ರಮಿಳಾ ಕುಮಾರಿ
BIG NEWS: ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ‘ಲೇಔಟ್’ ಹೆಸರಲ್ಲಿ ‘ಮರಗಳ ಮಾರಣಹೋಮ’
‘ಬಾಸ್ ಸಿನಿಮಾ’ಗೆ ನಟ ದರ್ಶನ್ ವಕೀಲರಿಂದ ನೋಟಿಸ್: ಸೆನ್ಸಾರ್ ಮಾಡದಂತೆ ಮಂಡಳಿಗೆ ಸೂಚನೆ
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು








