ಕೆಎನ್ ಎನ್ ನ್ಯೂಸ್ ಡೆಸ್ಕ್ : ಹಿಂದೆಲ್ಲ ವಯಸ್ಸು 40 ದಾಟುತ್ತಿದ್ದಂತೆ ನಾನಾ ಕಾಯಿಲೆಗಳು ಶುರುವಾಗುತ್ತಿತ್ತು. ಆದರೆ ಇದೀಗ ಜೀವನಶೈಲಿಯಿಂದ ಚಿಕ್ಕವಯಸ್ಸಿನಲ್ಲಿ ಕಾಯಿಲೆ ಬರುತ್ತದೆ.
‘ಪೊಲೀಸರಿಗೆ ನನ್ನ ಮಗನನ್ನು ಹುಡುಕಲಾಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು’ : ಶಾಸಕ ರೇಣುಕಾಚಾರ್ಯ
ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ಕೂಡಾ ಈ ಸಮಸ್ಯೆ ಕಾಡುತ್ತಿದೆ. ಆದರೆ ಯಾವುದೇ ಕಾಯಿಲೆ ಬರುವ ಮೊದಲು, ದೇಹದಲ್ಲಿ ಮೊದಲು ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ಮಾಡಿದರೆ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
ಮಧುಮೇಹದ ಲಕ್ಷಣಗಳು ಇದ್ದರೂ ಕೆಲವರು ಅದನ್ನು ನಿರ್ಲಕ್ಷಿಸುತ್ತಾರೆ. ನಮಗೆ ಆ ಸಮಸ್ಯೆ ಇಲ್ಲ ಎಂದುಕೊಳ್ಳುತ್ತಾರೆ. ಆದರೆ ಇದನ್ನು ಹೀಗೇ ಮುಂದುವರೆಸಿದರೆ ಸಕ್ಕರೆ ಕಾಯಿಲೆ ಅಪಾಯಕಾರಿ ಮಟ್ಟವನ್ನು ಆದ್ದರಿಂದ ಇಲ್ಲಿ ತಿಳಿಸಲಾದ ಯಾವುದೇ ರೋಗಲಕ್ಷಣಗಳನ್ನು ನೀವು ಹೊಂದಿದ್ದರೆ, ನೀವು ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸುವುದು ಉತ್ತಮ.
BIGG NEWS: ಬಿಜೆಪಿ ಅಧಿಕಾರಕ್ಕೆ ಬಂದು ಅಮಾಯಕರ ಕೈಯಲ್ಲಿ ಕೊಲೆ ಮಾಡಿಸುತ್ತಿದೆ; ಮಧು ಬಂಗಾರಪ್ಪ ವಾಗ್ದಾಳಿ
1. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸ್ನಾಯುಗಳು ಅಥವಾ ಕೀಲುಗಳಲ್ಲಿ ನೋವುಂಟಾಗುವುದು ಮಧುಮೇಹದ ಲಕ್ಷಣವಾಗಿರಬಹುದು. ಸ್ನಾಯು ಮತ್ತು ಕೀಲು ನೋವಿನ ಕಾರಣ ನಿಮಗೆ ತಿಳಿದಿಲ್ಲದಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
2. ನಿಮ್ಮ ದೇಹದ ಯಾವುದೇ ಭಾಗದಲ್ಲಿ ಗಾಯವಾಗಿದ್ದರೆ ಹಾಗೇ ಅದು ಬಹಳ ದಿನಗಳ ಕಾಲ ಗುಣವಾಗದೆ ಹಾಗೇ ಉಳಿದಿದ್ದರೆ ಅದು ಮಧುಮೇಹದ ಲಕ್ಷಣಗಳಾಗಿರಬಹುದು. ಮಧುಮೇಹ ಇರುವವರಲ್ಲಿ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಯಾರಾದರೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ ಪಡೆಯಿರಿ.
BIGG NEWS: ಬಿಜೆಪಿ ಅಧಿಕಾರಕ್ಕೆ ಬಂದು ಅಮಾಯಕರ ಕೈಯಲ್ಲಿ ಕೊಲೆ ಮಾಡಿಸುತ್ತಿದೆ; ಮಧು ಬಂಗಾರಪ್ಪ ವಾಗ್ದಾಳಿ
3. ರಾತ್ರಿ ಒಳ್ಳೆ ನಿದ್ರೆ ಮಾಡಿದರೂ ಬೆಳಗ್ಗೆ ಎದ್ದ ನಂತರ ಸುಸ್ತು ಎನಿಸಿದರೆ ಅದು ಮಧುಮೇಹದ ಲಕ್ಷಣ ಆಗಿರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಆಯಾಸ ಉಂಟಾಗುತ್ತದೆ. ಆದ್ದರಿಂದ, ಅಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
4. ನೀವು ಏನೂ ಪ್ರಯತ್ನ ಮಾಡದೆ ಇದ್ದಕ್ಕಿದ್ದಂತೆ ತೂಕ ಕಡಿಮೆಯಾದರೆ ಅದೂ ಕೂಡಾ ಮಧುಮೇಹದ ಲಕ್ಷಣವಾಗಿರಬಹುದು. ಮಧುಮೇಹ ಇರುವ ಕೆಲವರಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.