ಬೆಳಗಾವಿ : ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲಿ ಸಂತೋಷ. ತಾಕತ್ ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ವಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಎದುರಿಸಲು ನಾವು ಸಿದ್ಧರಿದ್ದೇವೆ.ಆದರೆ ಅವರು ಸಿದ್ಧರಿಲ್ಲ ತಾಕತ್ತಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ ಅಂದರೆ ತಾಕತ್ ಇಲ್ಲ ಎಂದು ಅರ್ಥ ಎಂದು ಬೆಳಗಾವಿಯಲ್ಲಿ ಸಚಿವ ಎನ್ ಎಸ್ ಬೋಸರಾಜು ಹೇಳಿಕೆ ನೀಡಿದರು.
ಹಿಂದೆ ಬಿಜೆಪಿ ಸರ್ಕಾರ ಕೊಟ್ಟಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಉತ್ತರ ಕರ್ನಾಟಕದಲ್ಲಿ ಇನ್ನೂ ಆಶ್ವಾಸನೆಗಳನ್ನು ಈಡೇರಿಸಿಲ್ಲ ಈ ಭಾಗದ ನೀರಾವರಿ ಯೋಜನೆಗಳು ಶೈಕ್ಷಣಿಕ ಹಾಗೂ ಆರೋಗ್ಯ ವಿಚಾರದಲ್ಲಿ ಬಿಜೆಪಿ ಸಾಧನೆವಾಗಿದೆ ಸರ್ಕಾರ ಇದ್ದರೂ ಕೂಡ ಜಾರಿಗೊಳಿಸಿರಲಿಲ್ಲ. ಆಲಮಟ್ಟಿ ಡ್ಯಾಮ್ ವಿಚಾರವಾಗಿ ಕೇಂದ್ರದಿಂದ ನೋಟಿಫಿಕೇಶನ್ ಆಗಿಲ್ಲ ಈ ಬಗ್ಗೆ ಕೇಂದ್ರವಾಗಲಿ ಬಿಜೆಪಿ ನಾಯಕರು ಆಗಲಿ ಚಕಾರ ಎತ್ತುತ್ತಿಲ್ಲ. ಮಹದಾಯಿ ಯೋಜನೆ ಆಗೋಗಿದೆ ಅಂತ ಬಿಜೆಪಿಗರು ಸಿಹಿ ಹಂಚಿದರು. ಅದರ ರಿಸಲ್ಟ್ ಈಗ ಏನಾಗಿದೆ? ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಹಣ ಗುಪಿಸಿತು ಆದರೆ ಇವರಿಗೂ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ. ಸದನದಲ್ಲಿ ಬಿಜೆಪಿ ನಾಯಕರು ತಮ್ಮ ಲೋಪಗಳನ್ನು ಎತ್ತಿ ತೋರಿಸಲಿ. ನಾವು ಅವರಿಗೆ ಉತ್ತರ ನೀಡುತ್ತೇವೆ ಆದರೆ ಜನರನ್ನು ದಾರಿ ತಪ್ಪಿಸುವ ವಿಷಯಗಳನ್ನು ಚರ್ಚೆಗೆ ತರುತ್ತಾರೆ . ನೀರಾವರಿ ವಿಚಾರದಲ್ಲಿ ಬಿಜೆಪಿಯವರದ್ದು ಶೂನ್ಯ ಸಾಧನೇ ಎಂದು ಸಚಿವ ಎನ್ಎಸ್ ಬಸವರಾಜು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.








