ಗದಗ : ಮುಡಾ ಸೈಟ್ ಹಂಚಿಕೆಯಲ್ಲಿ ಯಾವ ಹಗರಣ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಹಾಗಾದರೆ ಈ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಸವಾಲು ಹಾಕಿದರು.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಇಷ್ಟು ದೊಡ್ಡ ಹಗರಣ ದಲ್ಲಿ ಸತ್ಯಾಂಶ ಇಲ್ಲ ಅಂದಿದ್ರೆ ಇಷ್ಟು ದೊಡ್ಡ ಚರ್ಚೆ ಆಗುತ್ತಲೇ ಇರಲಿಲ್ಲ. ಈ ಹಗರಣದಲ್ಲಿ ಏನೂ ಇಲ್ಲ ಅಂದರೆ ಸ್ವತಂತ್ರವಾಗಿ ತನಿಖೆಗೆ ಹಿಂಜರಿಕೆ ಯಾಕೆ ? ಎಂದು ಗದಗದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.
ವಿಚಾರಣೆ ಮಾಡೋದು ಬೇರೆ, ತನಿಖೆ ಮಾಡುವುದು ಬೇರೆ. ಮುಡಾ ಹಗರಣದ ತನಿಖೆಗೆ ಒಪ್ಪಿಸಬೇಕು. ಸಂಪೂರ್ಣವಾಗಿ ಮುಡಾದಲ್ಲಿ ಎಕ್ಸೆಂಜ್ ಸೈಟ್ಗಳು ಯಾವ್ಯಾವು ಇವೆ. ಯಾವ ಸಂದರ್ಭದಲ್ಲಿ, ಯಾರಿಗೆ ನೀಡಿದ್ದೀರಿ ಸಂಪೂರ್ಣ ತನಿಖೆ ಆಗಬೇಕು. ಹೀಗಾಗಿ ಸಿಬಿಐ ತನಿಖೆಗೆ ನೀಡಲಿ. ಯಾವುದೇ ಹಗರಣ ಇಲ್ಲವೆಂದ ಮೇಲೆ ಯಾಕೆ ಭಯ ಪಡಬೇಕು ಎಂದರು ಪ್ರಶ್ನಿಸಿದ್ದಾರೆ.