ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಯೋಜನೆ ಎರಡೂವರೆ ವರ್ಷ ಪೂರೈಸಿದೆ. ಇಂತಹ ಶಕ್ತಿ ಯೋಜನೆಯನ್ನು ಆರ್ಥಿಕ ಯೋಜನೆ ಸುಧಾರಣೆಯಾದ್ರೆ ಗಂಡಸರಿಗೂ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾವು ಗ್ಯಾರಂಟಿಗೆ ವಿರೋಧ ಮಾಡ್ತಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಿದರೇ ಏನೇನೋ ಹೇಳ್ತಾರೆ. ಹಣ ಕಡಿಮೆ ಇದೆ ಎಂದು ಯಾರು ಹೇಳಿದರು? ಹೆಣ್ಣುಮಕ್ಕಳಿಗೆ 2 ಸಾವಿರ ಕೊಡ್ತೀರಿ. ನಮಗ್ಯಾಕೆ ಇಲ್ಲ ಅಂದ್ರು ಎಂದರು.
ನಮ್ಮ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ. ನಾನು ತಮಾಷೆಯಾಗಿ ಮಾತನಾಡಿದೆ. ನಾನು ಹಣಕಾಸು ಮಂತ್ರಿಯಾದ್ರೆ ಹೆಚ್ಚಿನ ಗ್ಯಾರಂಟಿ ನೀಡುತ್ತೇನೆ ಎಂಬುದಾಗಿ ತಿಳಿಸಿದರು.
SHOCKING: ಕಲಬುರ್ಗಿಯಲ್ಲೂ ರೇಣುಕಾಸ್ವಾಮಿ ರೀತಿಯ ಕೊಲೆ: ರಾಘವೇಂದ್ರ ನಾಯಕ್ ಬರ್ಬರ ಹತ್ಯೆ
BREAKING: 26/11 ದಾಳಿಯಲ್ಲಿ ಪಾಕ್ ಸೇನೆಯ ನಂಟು: ತಹವೂರ್ ರಾಣಾ ಬಹಿರಂಗ