ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಧಮ್ ಇದ್ದರೆ ಸಿದ್ದರಾಮಯ್ಯನ ಮೇಲೆ ಮಾಡಿರುವ ಆರೋಪಗಳನ್ನು ತನಿಖೆಗೆ ನಡೆಸಿಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಸಂಘಟನಾ ಕಾರ್ಯಾಗಾರ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ (Rahul Gandhi) ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳ ಫೈಲ್ ಯಾಕೆ ಕಳುಹಿಸುತ್ತೀರಿ? ನೀವೇ ಅದನ್ನು ಕ್ಯಾಬಿನೆಟ್ ನಲ್ಲಿಟ್ಟು ತನಿಖೆ ಮಾಡಿಸಿ. ಅದನ್ನು ರಾಹುಲ್ ಗಾಂಧಿಗೆ ಕಳುಹಿಸಿ ಏನ್ ಮಾಡ್ತೀರಾ? ನೀನು ಅತ್ತಂಗೆ ಮಾಡು ನಾನು ಹೊಡೆದ್ಹಂಗೆ ಮಾಡ್ತಿನಿ ಅನ್ನೋ ಥರದ ಮಾತು ಇದು ಎಂದು ಕುಟುಕಿದ್ದಾರೆ.
ಕನ್ನಡ ರಾಜ್ಯೋತ್ಸವ ದಿನ ಜೆಡಿಎಸ್ನ `ಪಂಚ ರತ್ನ’ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಕೋಲಾರದ ಮುಳುಬಾಗಿಲಿನಿಂದ ಆರಂಭವಾಗಿ ಪ್ರತಿ ದಿನವೂ ಒಂದು ತಾಲೂಕಿನ ಒಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಮೊದಲ ಹಂತದಲ್ಲಿ 35 ವಿಧಾನಸಭೆಗೆ ಭೇಟಿ ನೀಡಿ, ನವೆಂಬರ್ 1 ರಿಂದ ಡಿಸೆಂಬರ್ 5ರ ವರೆಗೆ ಮೊದಲ ಹಂತದ ಪಂಚ ರತ್ನ ರಥ ಯಾತ್ರೆ ನಡೆಸುತ್ತೇನೆ.