ಬೆಂಗಳೂರು : ಸದ್ಯ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಬಿಡುಗಡೆ ಕುರಿತು ವಿಕಟಿನ ಪರಿಸ್ಥಿತಿ ಎದುರಾಗಿದೆ ಏಕೆಂದರೆ ಈ ಕುರಿತು ನಾಳೆ ವಿಶೇಷ ಸಂಪುಟ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಜಾತಿಗಣತಿ ವರದಿ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತದೆ ಇದರ ಬೆನ್ನಲ್ಲೇ ಜಾತಿಗಣತಿ ವರದಿ ಬಿಡುಗಡೆ ಮಾಡದೇ ಹೋದರೆ ಬೀದಿ ಬೀದಿಗಳಲ್ಲಿ ದಂಗೆ ಏಳುತ್ತೇವೆ ಎಂದು ಶೋಷಿತ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾರದೇ ಹಾಗೂ ಯಾವುದೇ ಒತ್ತಾಯಕ್ಕೆ ಮಣಿಯದೆ ರಾಜ್ಯ ಸರ್ಕಾರ ಜಾತಿಗಣತಿ ವರದಿ ಜಾರಿ ಮಾಡಬೇಕು. ಜಾತಿ ಗಣತಿ ವರದಿಯನ್ನು ಸರಕಾರ ಬಿಡುಗಡೆ ಮಾಡಬೇಕು. ಅಕಸ್ಮಾತ್ ವರದಿ ವಾಪಾಸ್ ತಗೊಂಡ್ರೆ ರಾಜ್ಯಾದ್ಯಂತ ಬೀದಿ ಬೀದಿಯಲ್ಲಿ ದಂಗೆ ಏಳುತ್ತೇವೆ ಎಂದು ಶೋಷಿತ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ವರದಿ ವಾಪಸ್ ತಗೊಂಡ್ರೆ ಬೀದಿ ಬೀದಿಯಲ್ಲಿ ದಂಗೆ ಏಳುತ್ತೇವೆ. ವರದಿ ಬಿಡುಗಡೆ ಮಾಡಬಾರದು ಅಂದರೆ ಅವರ ಜಾಗೀರಾ? ನಾವು ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಒಕ್ಕಲಿಗರಿಗೆ ಲಿಂಗಾಯತರಿಗೆ ರಾಜ್ಯ ಬರೆದು ಕೊಟ್ಟಿಲ್ಲ. ಸಂವಿಧಾನದ ಆಶಯದಂತೆ ರಾಜ್ಯಭಾರ ಮಾಡಬೇಕು ಶಾಮನೂರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಅವರ ತರ ಹಣ ಇರಬಹುದು ಆಗದ ಎಲ್ಲಾ ಸಚಿವರನ್ನು ಶಾಸಕರನ್ನು ಕೊಂಡು ಇಟ್ಕೊಂಡಿದ್ದಾರಾ? ವಯಸ್ಸಿಗೆ ತಕ್ಕಂತೆ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಬೇಕು ಎಂದು ಆಕ್ರೋಶ ಹೊರಹಾಕಿದರು.