ಮೈಸೂರು : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಶ್ರಮವಹಿಸಿದ್ದಾರೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅಪರಾಧ ಪ್ರಕರಣ ಕಡಿಮೆ ಮಾಡಬಹುದು ಎಂದು ಬೆಂಗಳೂರಿನ ಕೋರಮಂಗಲ ಕೆಎಸ್ಆರ್ಪಿ ಮೈದಾನದಲ್ಲಿ ಆಯೋಜನೆ ಮಾಡಿದ್ದ ಪೊಲೀಸ್ ಧ್ವಜ ಕಾರ್ಯಕ್ರಮದಲ್ಲಿ 158 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಮುಖ್ಯಮಂತ್ರಿ ಪದಕ ಪಡೆದ 158 ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಪೊಲೀಸರು ದಿನದ 24 ಗಂಟೆಯೂ ಕೂಡ ಕೆಲಸ ಮಾಡುತ್ತಾರೆ. ಮಾದಕ ವಸ್ತು ಪ್ರಕರಣಗಳು ಹೆಚ್ಚಾಗುತ್ತಿವೆ ಪೊಲೀಸರಿಗೆ ಗೊತ್ತಿಲ್ಲದೆ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ನಡಿಯಲ್ಲ. ಹಾಗಾಗಿ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು.
ಠಾಣಾ ವ್ಯಾಪ್ತಿಯಲ್ಲಿ ಇನ್ಸ್ಪೆಕ್ಟರ್ಸ್ ಒಳ್ಳೆ ರೀತಿ ಕೆಲಸ ಮಾಡಿದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದು ಹಾಗಾಗಿ ತಂತ್ರಜ್ಞಾನವನ್ನು ಪೊಲೀಸರು ಸರಿಯಾಗಿ ಬಳಸಿಕೊಳ್ಳಿ ಪೊಲೀಸ್ ಧ್ವಜ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು .








