ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಸಿಎಂ ಸಿದ್ಧರಾಮಯ್ಯ ಇದ್ದಂತ ವೇದಿಕೆಯಲ್ಲೇ ಸ್ವಾಮೀಜಿ ಆಗ್ರಹಿಸಿದ್ದರು. ಈ ಬಳಿಕ ಸಿಎಂ ಪಟ್ಟದ ವಿವಾದ ತಾರಕಕ್ಕೇರಿತ್ತು. ಅಲ್ಲದೇ ಅನೇಕ ಸ್ವಾಮೀಜಿಗಳು ಚಂದ್ರಶೇಖರ ಸ್ವಾಮೀಜಿ ಮಾತಿಗೆ ಧ್ವನಿಗೂಡಿಸಿದ್ದರು. ಈ ಬೆನ್ನಲ್ಲೇ ಸ್ವಾಮೀಜಿಗಳು ರಾಜಕೀಯ ಮಾಡುವುದಾದರೇ ಆ ಪಟ್ಟಕ್ಕೂ ಚುನಾವಣೆ ನಡೆಯುವುದು ಒಳಿತಲ್ಲವೇ ಅಂತ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ತಾರಕಕ್ಕೇರಿದೆ. ಈ ಬಗ್ಗೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಕೂಡ ತಮ್ಮ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ನೀಡಬೇಕು ಅಂತ ಹೇಳಿಕೆಗಳನ್ನು ಬಹಿರಂಗವಾಗೇ ನೀಡುತ್ತಿದ್ದಾರೆ.

ಈ ನಡುವೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಎಕ್ಸ್ ನಲ್ಲಿ ಇದೇ ವಿಚಾರವಾಗಿ ಪೋಸ್ಟ್ ಮಾಡಿದ್ದು, ಸ್ವಾಮೀಜಿಗಳು ರಾಜಕೀಯ ಮಾಡುವುದಾದರೇ, ಆ ಸ್ವಾಮೀಜಿ ಪಟ್ಟಕ್ಕೂ ಎಲೆಕ್ಷನ್ ನಡೆಯುವುದು ಒಳಿತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಗುರುಕಿರಣ್ ಅವರ ಎಕ್ಸ್ ಪೋಸ್ಟಿಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಸ್ವಾಮೀಜಿಗಳು ಗೋಡಂಬಿ, ದ್ರಾಕ್ಷಿ ತಿಂದುಕೊಂಡು ಆರಾಮಾಗಿರಲಿ. ರಾಜಕಾರಣ ವಿಚಾರ ಅವರಿಗೇಕೆ ಅಂತ ಕೇಳಿದ್ದಾರೆ.

ಬೆಂಗಳೂರಲ್ಲಿ ‘HIV’ ಸೊಂಕಿತನ ಮೇಲೆ ‘ಸಲಿಂಗಕಾಮಿ’ಯಿಂದ ಅತ್ಯಾಚಾರ : ಮನೆಯಲ್ಲಿದ್ದ ನಗದು ದೋಚಿ ಪರಾರಿ

ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗಲೇಬೇಕು, ಆಗೇ ಆಗುತ್ತಾರೆ : ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ

Share.
Exit mobile version