ಪಾಕಿಸ್ತಾನ್ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಹುಚ್ಚುತನದ ಹೇಳಿಕೆ ನೀಡಿದ್ದಾರೆ ಭಾರತ ನಮ್ಮ ತಂಟೆಗೆ ಏನಾದರೂ ಬಂದರೆ ಜೀವನಪರ್ಯಂತ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತೇವೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ನಮ್ಮ ಜೊತೆ ಇಡೀ ವಿಶ್ವವನ್ನೇ ನಾಶ ಮಾಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಡಾಯಿ ಹುಚ್ಚುತನದ ಹೇಳಿಕೆ ನೀಡಿದ್ದಾರೆ.
ಭಾರತ ನಮ್ಮ ತಂಟೆಗೆ ಬಂದರೆ ಮರೆಯಲಾಗದ ಉತ್ತರ ನೀಡುತ್ತೇವೆ. ಇದುವರೆಗೂ ಯಾರು ನೀಡದಂತಹ ಪ್ರತ್ಯುತ್ತರ ನೀಡುತ್ತೇವೆ. ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತೇವೆ. ನಮ್ಮ ಮೇಲೆ ಇಸ್ರೇಲ್ ರೀತಿ ದಾಳಿಗೆ ಭಾರತ ಪ್ಲಾನ್ ಮಾಡಿದೆ. ನೆತನ್ಯಾಹೂ ಮಾಡಿದಂತೆ ದಾಳಿ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಸರ್ವನಾಶ ಮಾಡುತ್ತೇವೆ. ನಮ್ಮ ಜೊತೆ ಯಾರನ್ನು ಕೂಡ ಉಳಿಸುವುದಿಲ್ಲ. ಇಡೀ ವಿಶ್ವವನ್ನೇ ನಾಶ ಮಾಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಡಾಯಿ ಹುಚ್ಚುತನದ ಹೇಳಿಕೆ ನೀಡಿದ್ದಾರೆ.