ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ವಿಚಾರವಾಗಿ ಮುನಿರತ್ನ ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತಾಗಿ, ಬೆಂಗಳೂರಿನಲ್ಲಿ ಆದಿಚುಂಚನಗಿರಿಯ ಮಹಾಸಂಸ್ಥಾನದ ಪೀಠಾಧ್ಯಕ್ಷರಾದಂತಹ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಆಡಿಯೋದಲ್ಲಿ ಮುನಿರತ್ನ ಧ್ವನಿ ನಿಜವಾಗಿದ್ದರೆ, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉರಿ ಗೌಡ ನಂಜೇಗೌಡ ವಿಚಾರವಾಗಿ ಕರೆದು ಮುನಿರತ್ನಗೆ ಬುದ್ಧಿ ಹೇಳಿದ್ದೆ. ಆಗ ಮಾಜಿ ಸಚಿವ ಮುನಿರತ್ನ ಸ್ಟಾಪ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಮುದ್ರಣದಲ್ಲಿ ನಿಜ ಆಯ್ತು ಅಂದರೆ. ಮಾತನಾಡಿರೋವರನ್ನು ಕ್ಷಮಿಸಲು ಆಗುವುದಿಲ್ಲ. ಯಾರೇ ಮಾತಾಡಿದರೂ ನಾಗರಿಕ ಸಮಾಜ ಒಪ್ಪುವುದು ಖಂಡನೀಯ ಎಂದರು.
ಆಧುನಿಕತೆ ಬೆಳೆದಿದೆ ಅಂತ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಕೇವಲ ಒಕ್ಕಲಿಗ ದಲಿತರಿಗೆ ಮಾತಾಡಿದ್ದಾರೆ ಅನ್ನೋದು ಎಷ್ಟು ಮುಖ್ಯವೋ, ಅದೇ ರೀತಿ ಸಮಾಜದಲ್ಲಿನ ಎಲ್ಲಾ ಸಮುದಾಯಗಳು ಕೂಡ ಅಷ್ಟೇ ಮುಖ್ಯವಾಗಿವೆ. ಪ್ರತಿಯೊಂದು ಸಮುದಾಯವನ್ನು ನಮ್ಮ ಸಂವಿಧಾನ ಒಪ್ಪಿಕೊಂಡಿದೆ. ನಮ್ಮ ದೇಶದ ಅಸ್ಮಿತೆ ತಾಯಂದಿರು, ದೇಶವನ್ನು ಭಾರತ ಮಾತೆ ಅಂತೇವೆ ಎಂದು ತಿಳಿಸಿದರು.
ಇಂತಹ ತಾಯಂದಿರ ಬಗ್ಗೆ ಹೇಳಲು ಆಗದಂತಹ ಪದಗಳು ಧ್ವನಿಯಲ್ಲಿವೆ. ಇದು ಸರಿಯಲ್ಲ ಅಂತ ಭಾವನೆ ಇದೆ ಯಾರೇ ಆದರೂ ಕ್ರಮ ಆಗಲಿ. ಸಮಸ್ತ ತಾಯಂದಿರ ಬಗ್ಗೆ ಮಾತಾಡಿದ್ದು ಸರಿಯಲ್ಲ. ನಾಳೆ ಒಕ್ಕಲಿಗರ ಸಂಘದಿಂದ ಶಾಸಕ ಮುನಿರತ್ನ ವಿರುದ್ಧ ಧರಣಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ನಾಳೆಯ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.