ಬೆಂಗಳೂರು : ವಿಧಾನಸೌಧದಲ್ಲಿ ಪತ್ತೆಯಾದ ಹಣಕ್ಕೂ ಸಚಿವ ಸಿಸಿ ಪಾಟೀಲ್ ಗೂ ಸಂಬಂಧ ಇದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಆರೋಪಕ್ಕೆ ಸಚಿವ ಸಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದೆ. ಪೊಲೀಸರು ತನಿಖೆ ಮಾಡಿದ್ರೆ ಗೊತ್ತಾಗುತ್ತದೆ, ಹಣ ಕೊಡುವುದಾದರೆ ನನಗೆ ನೇರವಾಗಿ ಕೊಡ್ತಾ ಇದ್ದರು ಎಂದು ಕಾಂಗ್ರೆಸ್ ಆರೋಪಕ್ಕೆ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಏನಿದು ಕಾಂಗ್ರೆಸ್ ಆರೋಪ
ಜಗದೀಶ್ ನಿನ್ನೆ ಸಂಜೆ 5.30 ಸುಮಾರಿಗೆ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ವಿಧಾನಸೌಧದಲ್ಲಿ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ. ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ. ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
BREAKING NEWS: ಗುತ್ತಿಗೆದಾರ ಸಂತೋಪ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪಗೆ ಮತ್ತೆ ಸಂಕಷ್ಟ